ಕೊಡಗಿನಲ್ಲಿ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಸಿಎಂ ಚಾಲನೆ

Spread the love

ಕೊಡಗಿನಲ್ಲಿ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಸಿಎಂ ಚಾಲನೆ

ಮಡಿಕೇರಿ: ಕೊಡಗಿನ ಕೌಟುಂಬಿಕ ಅಪ್ಪಚೆಟ್ಟೋಳಂಡ 23ನೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ ನೀಡಿದರು.

ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೊಡವ ಭಾಷೆಯಲ್ಲಿ ಮಾತು ಪ್ರಾರಂಭಿಸಿ ಮುಂದುವರೆದು ಮಾತನಾಡಿ ನಶಿಸಿ ಹೋಗುತ್ತಿರುವ ಕುಟುಂಬಗಳ ನಡುವಿನ ಸಂಬಂಧ ಮತ್ತೆ ಬೆಸೆಯಲು ಕುಟುಂಬಗಳ ನಡುವಿನ ಹಾಕಿ ಸಹಕಾರಿ ಎಂದರು.

ಕುಟುಂಬಗಳಲ್ಲಿ ಸದಸ್ಯರ ಸಂಬಂಧ ಉತ್ತಮವಾಗಿರಬೇಕು, ಅದು ಭಾರತದ ಸಮಾಜಕ್ಕೆ ಉತ್ತಮ. ಇದು ಭಾರತೀಯ ನಾಗರಿಕತೆ, ನಿಜವಾದ ಸಂಸ್ಕೖತಿಗೆ ಸೂಕ್ತ ಉದಾಹರಣೆ – ಕೊಡವ ಕೌಟುಂಬಿಕ ಹಾಕಿ ಇದಕ್ಕೆ ನಿದರ್ಶನವಾಗಿದೆ. ಹಾಕಿ ಕ್ರೀಡೆಯ ಮೂಲಕ ಕೊಡವರು ತಮ್ಮಲ್ಲಿನ ಉತ್ತಮ ಕೌಟುಂಬಿಕ ಸಂಬಂಧಗಳಿಗೆ ಮಾದರಿಯಾಗಿದ್ದಾರೆ. ಕೆ.ಜಿ.ಬೋಪಯ್ಯ ಅವರು ಹಾಕಿ ಕ್ರೀಡೆಗೆ ಸೂಕ್ತ ಅನುದಾನ ತರುವಲ್ಲಿ ಶ್ರಮಿಸಿದ್ದಾರೆ. ನನ್ನಲ್ಲಿ ಬೋಪಯ್ಯ ಅವರ ನಿಯೋಗ ಬಂದಾಗ 1 ಕೋಟಿ ಕೇಳಿದ್ದರು. ತಕ್ಷಣವೇ ನಾನೂ 1 ಕೋಟಿ ಕೊಟ್ಟಿದ್ದೇನೆ. ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ ನನ್ನ ತಂದೆ ಬೊಮ್ಮಾಯಿ ಸಚಿವರಾಗಿದ್ದಾಗ ಅನುದಾನ ನೀಡಿದ್ದರು. ಇದೇ ವೇಳೆ ಕೊಡವ ಅಭಿವೖದ್ದಿ ನಿಗಮ ಸ್ಥಾಪನೆಗೆ ನಾನು ಕೂಡಲೇ ಆದೇಶ ಹೊರಡಿಸುವುದಾಗಿ ಹೇಳಿದರು.

ಇದೇ ವೇಳೆ ಸಚಿವರು ಎಸ್.ಟಿ.ಸೋಮಶೇಖರ್, ಶಾಸಕ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಸುಜಾಕುಶಾಲಪ್ಪ, ಮನುಮುತ್ತಪ್ಪ, ಪದ್ಮಶ್ರೀ ಎಂ.ಪಿ.ಗಣೇಶ್, ಪದ್ಮಶ್ರೀ ರಾಣಿ ಮಾಚಯ್ಯ, ಎ.ಬಿ.ಸುಬ್ಬಯ್ಯ, ಪಾಂಡಂಡ ಬೋಪಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೊಡಗಿನ ಕೌಟುಂಬಿಕ ಅಪ್ಪಚೆಟ್ಟೋಳಂಡ 23ನೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಮಾ.18ರಿಂದ ಆರಂಭವಾಗಿ ಏಪ್ರಿಲ್ 9 ರವರೆಗೆ ನಾಪೋಕ್ಲುವಿನಲ್ಲಿ ಜರುಗಲಿದ್ದು, 336 ಕುಟುಂಬ ತಂಡಗಳು ಪಾಲ್ಗೊಂಡಿವೆ.


Spread the love

Leave a Reply

Please enter your comment!
Please enter your name here