ಕೊಡಗಿನಲ್ಲಿ ಮತದಾನದ ಮಹತ್ವ ಸಾರಿದ ಮಿನಿ ವಿಮಾನಗಳು

Spread the love

ಕೊಡಗಿನಲ್ಲಿ ಮತದಾನದ ಮಹತ್ವ ಸಾರಿದ ಮಿನಿ ವಿಮಾನಗಳು

ಮಡಿಕೇರಿ: ಬಾಳೆಲೆ ಬಳಿಯ ನಿಟ್ಟೂರು ಕಾರ್ಮಾಡು ಗ್ರಾಮದಲ್ಲಿ ಮಿನಿ ವಿಮಾನಗಳು ವಿಭಿನ್ನ ರೀತಿಯಲ್ಲಿ ಬಾನಂಗಳದಲ್ಲಿ ಹಾರಾಡಿ ಮತದಾನದ ಮಹತ್ವ ಸಾರುವ ಮೂಲಕ ಕಿಕ್ಕಿರಿದು ಸೇರಿದ್ದ ಜನರ ಗಮನ ಸೆಳೆದವು.

ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ಆಶ್ರಯದಲ್ಲಿ ಬಾಳೆಲೆ ಕಾರ್ಮಾಡು ಗ್ರಾಮ ನಿವಾಸಿ ಕೊಳ್ಳಿಮಾಡ ರಾಜಿ ಗಣಪತಿ ಅವರ ಸಂಗ್ರಹದಲ್ಲಿರುವ ಮಿನಿ ವಿಮಾನಗಳ ಪ್ರದರ್ಶನ ಮತ್ತು ಹಾರಾಟ ಅತ್ಯಾಕರ್ಷಕವಾಗಿ ಜರುಗಿತು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮತ್ತು ಜಿ.ಪಂ.ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಮಿನಿ ವಿಮಾನ ಹಾರಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಮತದಾನ ಮಹತ್ವ ಸಾರುವ ಸಂದೇಶ ಅಭಿಯಾನಕ್ಕೆ ಚಾಲನೆ ನೀಡಿದರು.

ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಮಾಡು ಗ್ರಾಮದ ಖಾಸಗಿ ಏರ್‌ಸ್ಟ್ರಿಪ್‌ ನಲ್ಲಿ ಮಿನಿ ವಿಮಾನಗಳು ಸದ್ದುಮಾಡುತ್ತಾ ಬಾನಂಗಣದಲ್ಲಿ ಹಾರಾಟ ನಡೆಸಿದವು. ಮಿನಿ ಸೆಸ್ನಾ, ಎಕ್ಸ್‌ ಎಫ್ 80, ಎಕ್ಸ್ 380 ಶ್ರೇಣಿಯ ಮಿನಿ ವಿಮಾನಗಳು, ಮಿನಿ ಹೆಲಿಕಾಪ್ಟರ್ ಗಳು, ತ್ರಿಡಿ ವಿಮಾನಗಳು ಕೂಡ ಹಾರಾಟದ ಮೂಲಕ ಗಮನ ಸೆಳೆದವು.

ಕೊಳ್ಳಿಮಾಡ ರಾಜಿ ಗಣಪತಿ ಸಂಗ್ರಹದಲ್ಲಿರುವ 32 ಮಿನಿ ವಿಮಾನಗಳ ಪ್ರದರ್ಶನ ಗ್ರಾಮಸ್ಥರ ಮನ ಸೆಳೆಯಿತು. ಬೆಂಗಳೂರಿನ ಯುವ ಪೈಲಟ್ ಆದಿತ್ಯ ಪವಾರ್ ತನ್ನ ಕೈಚಳಕದಲ್ಲಿ ಮಿನಿ ವಿಮಾನವನ್ನು ಸಂಗೀತದ ನಾದಕ್ಕೆ ತಕ್ಕಂತೆ ಬಾನಿನಲ್ಲಿ ನೃತ್ಯ ಶೈಲಿಯಲ್ಲಿ ತೇಲಿಸುತ್ತಾ ಪ್ರದರ್ಶನ ನೀಡಿದ್ದು, ಪ್ರೇಕ್ಷಕರ ಅಪಾರ ಶ್ಲಾಘನೆಗೆ ಕಾರಣವಾಯಿತು. ಬೆಂಗಳೂರಿನ ಪೈಲಟ್ ಎಮಿಲ್ ಅವರಿಂದಲೂ ವಿಶಿಷ್ಟ ರೀತಿಯಲ್ಲಿ ಮಿನಿವಿಮಾನಗಳ ಹಾರಾಟ ನಡೆಯಿತು. ಮಾಪಂಗಡ ಮುತ್ತಣ್ಣ, ಕೋಡಿಮಣಿಯಂಡ ಸುನಿಲ್ ಸುಬ್ಬಯ್ಯ ಅವರು ಮಿನಿ ವಿಮಾನಗಳ ಹಾರಾಟಕ್ಕೆ ಸಹಕಾರ ನೀಡಿದ್ದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮಾತನಾಡಿ, ಮತದಾನದ ಮಹತ್ವದ ಸಂಬಂಧಿತ ಕಳೆದ ಒಂದೂವರೆ ತಿಂಗಳಿನಿಂದ ಜಿಲ್ಲೆಯಲ್ಲಿ ವಿನೂತನ ರೀತಿಯಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಅಂತೆಯೇ ಮಿನಿ ವಿಮಾನಗಳ ಹಾರಾಟ ಪ್ರದರ್ಶನದ ಮೂಲಕವೂ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊಡಗಿನಲ್ಲಿ ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಿದರು.

ಸ್ಪೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಮಾತನಾಡಿ, ಸ್ಪೀಪ್ ಸಮಿತಿ ಮೇ 10ರಂದು ನಡೆಯುವ ಚುನಾವಣೆಗೆ ಈ ಬಾರಿ ವಿನೂತನ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಾ ಮತದಾನದ ಮಹತ್ವ ಸಾರುತ್ತಿದೆ. ಮತದಾನ ಮಾಡಿ ಎಂದು ಮತದಾರರನ್ನು ಉತ್ತೇಜಿಸುತ್ತಿದೆ. ಕಾರ್ಮಾಡು ಗ್ರಾಮದಲ್ಲಿ ಕೊಳ್ಳಿಮಾಡ ರಾಜಿ ಗಣಪತಿ ಅವರ ತಂಡದಿಂದ ಆಯೋಜಿತ ಮಿನಿ ವಿಮಾನಗಳ ಪ್ರದರ್ಶನ ವಿಶಿಷ್ಟವಾಗಿ ಗಮನ ಸೆಳೆದಿದೆ. ನಿರೀಕ್ಷೆಗೂ ಮೀರಿ ಕಾರ್ಯಕ್ರಮಕ್ಕೆ ಜನ ಸೇರಿ ಯಶಸ್ವಿಯಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಬಾನಾ ಎಂ.ಶೇಖ್, ಜಿ.ಪಂ.ಉಪ ಕಾರ್ಯದರ್ಶಿ ಧನರಾಜ್, ಜಿ.ಪಂ.ಯೋಜನಾ ನಿರ್ದೇಶಕ ಜಗದೀಶ್, ಕನ್ನಡ ಸಾಹಿತ್ಯ ಪರಿ?ತ್ ಕೊಡಗು ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಧನಂಜಯ್, ಮಡಿಕೇರಿ ತಾಲೂಕು ಜಾನಪದ ಪರಿ?ತ್ ಅಧ್ಯಕ್ಷ ಅನಿಲ್ ಎಚ್.ಟಿ., ಗೋಣಿಕೊಪ್ಪಲು ರೋಟರಿ ಸಂಸ್ಥೆ ಅಧ್ಯಕ್ಷೆ ಸುಭಾಷಿಣಿ ಜೆ.ಕೆ., ಮೂರ್ನಾಡು ಜಾನಪದ ಪರಿ?ತ್ ಗೌರವಾಧ್ಯಕ್ಷ ಕಿಗ್ಗಾಲು ಗಿರೀಶ್, ರೋಟರಿ ವುಡ್ಸ್ ನಿರ್ದೇಶಕ ಕಿಗ್ಗಾಲು ಹರೀಶ್, ಕುಶಾಲನಗರ ಜಾನಪದ ಪರಿ?ತ್ ನಿರ್ದೇಶಕಿ ಫ್ಯಾನ್ಸಿ ಮುತ್ತಣ್ಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಸಿ.ರಂಗಧಾಮಯ್ಯ, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಬಾಲರಾಜ್ ರಂಗರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಇತರರು ಇದ್ದರು.


Spread the love

Leave a Reply

Please enter your comment!
Please enter your name here