ಕೊಡಗು ಜಿಲ್ಲೆಯಲ್ಲಿ ಆ.24ರ ಬೆಳಿಗ್ಗೆ 6ರಿಂದ 27ರ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ

Spread the love

ಕೊಡಗು ಜಿಲ್ಲೆಯಲ್ಲಿ ಆ.24ರ ಬೆಳಿಗ್ಗೆ 6ರಿಂದ 27ರ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ
 
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆ.24ರ ಬೆಳಿಗ್ಗೆ 6 ಗಂಟೆಯಿಂದ 27ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೋಮವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಪ್ರತಿಭಟನೆ, ಜಾಥಾ, ಮೆರವಣಿಗೆ, ಕಪ್ಪುಬಾವುಟ ಪ್ರದರ್ಶನ ನಿಷೇಧಿಸಲಾಗಿದೆ.

ಐವರು ಮತ್ತು ಅದಕ್ಕಿಂತ ಹೆಚ್ಚಿನ ಜನರು ಗುಂಪುಗೂಡದಂತೆ ನಿರ್ಬಂಧ ವಿಧಿಸಲಾಗಿದೆ.

ಈ ಮೂಲಕ ಆ.26ರಂದು ಕಾಂಗ್ರೆಸ್ ಕರೆ ನೀಡಿದ್ದ ‘ಮಡಿಕೇರಿ ಚಲೋ’ ಹಾಗೂ ಬಿಜೆಪಿ ಆಯೋಜಿಸಿದ್ದ ‘ಜನಜಾಗೃತಿ ಸಮಾವೇಶ’ಗಳಿಗೆ ಅನುಮತಿ ನಿರಾಕರಿಸಲಾಗಿದೆ.


Spread the love