ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬ: ಲೋಗೋ ಆಹ್ವಾನ

Spread the love

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬ: ಲೋಗೋ ಆಹ್ವಾನ

ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಹಬ್ಬವನ್ನು 2023 ರಲ್ಲಿ ನಡೆಸಲು ತೀರ್ಮನಿಸಲಾಗಿದ್ದು, ಬೆಳ್ಳಿಹಬ್ಬಕ್ಕಾಗಿ ಕಲಾವಿದರಿಂದ ಲೋಗೋ ಆಹ್ವಾನಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ತಿಳಿಸಿದ್ದಾರೆ.

ಕಲಾವಿದರು ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬದ ಲೋಗೋವನ್ನು ರಚಿಸಿ, ಎ4 ಅಳತೆಯಲ್ಲಿ ಪ್ರಿಂಟ್ ಮಾಡಿ ಕಳಿಸಬೇಕು. ಅತ್ಯುತ್ತಮ ಲೋಗೋವನ್ನು ಬೆಳ್ಳಿಹಬ್ಬಕ್ಕೆ ಆಯ್ಕೆ ಮಾಡಲಿದ್ದು, ರೂ. 5 ಸಾವಿರ ನಗದು ನೀಡಲಾಗುವುದು. ರಾಜ್ಯದ ಕಲಾವಿದರು ಲೋಗೋ ತಯಾರಿಸುವ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಸಕ್ತ ಕಲಾವಿದರು ನ.30ರ ಒಳಗಾಗಿ ಲೋಗೋವನ್ನು ತಯಾರಿಸಿ, ಪ್ರಿಂಟ್ ಮಾಡಿದ ಪ್ರತಿಯನ್ನು ಕಳಿಸಿಕೊಡಬೇಕು ಹಾಗೂ ಲೋಗೋ ಪಿ.ಡಿ.ಎಫ್ ಅಥವಾ ಜೆ.ಪಿ.ಇ.ಜಿ ಫೈಲ್ ಪ್ರತಿಯನ್ನು ಇ-ಮೇಲ್ ಮಾಡಬೇಕು. ಇ-ಮೇಲ್ ಹಾಗೂ ಅಂಚೆ ಈ ಎರಡರಲ್ಲೂ ಕಳಿಸುವ ಲೋಗೋವನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. ವಿಳಾಸ: ಅಧ್ಯಕ್ಷರು, ಕೊಡಗು ಪ್ರೆಸ್ ಕ್ಲಬ್, ಪತ್ರಿಕಾ ಭವನ, ಕೈಗಾರಿಕಾ ಬಡಾವಣೆ, ಮಡಿಕೇರಿ – 571201 ವಿಳಾಸಕ್ಕೆ ಕಳಿಸಿಕೊಡಬೇಕು. ಫೈಲ್ ಅನ್ನು kodagupressclub1998@gmail.com ಗೆ ಇಮೇಲ್ ಮಾಡಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ 9731783149 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.


Spread the love

Leave a Reply

Please enter your comment!
Please enter your name here