ಕೊಡವೂರು: ದೀವಿಗೆ ಅಮವಾಸ್ಯೆ ಕಷಾಯ ವಿತರಣೆ

Spread the love

ಕೊಡವೂರು: ದೀವಿಗೆ ಅಮವಾಸ್ಯೆ ಕಷಾಯ ವಿತರಣೆ

ಮಲ್ಪೆ: ಬ್ರಾಹ್ಮಣ ಮಹಾಸಭಾ ಕೊಡವೂರು ರಜತೋತ್ಸವ ಸಮಿತಿ ಇದರ ವತಿಯಿಂದ ದೀವಿಗೆ ಅಮಾವಾಸ್ಯೆಯ ಪ್ರಯುಕ್ತ ಸಾರ್ವಜನಿಕರಿಗೆ ಹಾಲೆ ಮರದ ತೊಗಟೆಯ ಔಷಧಿಯ ಕಷಾಯ ವಿತರಣೆ ಕಾರ್ಯಕ್ರಮ ನಡೆಯಿತು.

ಕೊಡವೂರು ಆಸು ಪಾಸಿನ ಹಿಂದು, ಮುಸ್ಲಿಮ್, ಕ್ರಿಶ್ಚಿಯನ್ ಸಮುದಾಯದ ಸುಮಾರು 500 ಕುಟುಂಬಗಳು ಈ ಕಾರ್ಯಕ್ರಮದ ಪ್ರಯೋಜನೆ ಪಡೆದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀ ನಾರಾಯಣ ಬಲ್ಲಾಳ್, ರಜತೋತ್ಸವ ಸಮಿತಿಯ ಕಾರ್ಯಾದ್ಯಕ್ಷ ಶ್ರೀ ಮಂಜುನಾಥ್ ಭಟ್, ಶ್ರೀ ಲಕ್ಷ್ಮೀನಾರಾಯಣ ಭಟ್, ಶ್ರೀ ಶ್ರೀಶ ಭಟ್ ಮತ್ತು ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು


Spread the love