ಕೊಡವೂರು ದೇವಸ್ಥಾನ ಅಭಿವೃದ್ಧಿಗಾಗಿ ಮುಜರಾಯಿ ಸಚಿವರಿಗೆ ಮನವಿ

Spread the love

ಕೊಡವೂರು ದೇವಸ್ಥಾನ ಅಭಿವೃದ್ಧಿಗಾಗಿ ಮುಜರಾಯಿ ಸಚಿವರಿಗೆ ಮನವಿ

ಉಡುಪಿ: ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರಿನ ವ್ಯವಸ್ಥಾಪನಾ ಸಮಿತಿಯ ಆಧ್ಯಕ್ಷರಾದ  ಸಾಧು ಸಾಲಿಯಾನ್ ರವರ ನೇತೃತ್ವದಲ್ಲಿ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆಯವರನ್ನು ಬೆಂಗಳೂರಿನ ವಿಕಾಸಸೌಧದ ಅವರ ಕಛೇರಿಯಲ್ಲಿ ಭೇಟಿಯಾಗಿ ದೇವಸ್ಥಾನದ ಮುಂದಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿ, ಮನವಿ ಸಲ್ಲಿಸಿ ದೇವರಗಂಧ ಪ್ರಸಾದವನ್ನು ನೀಡಿ ಅಭಿನಂದಿಸಲಾಯಿತು.

ದೇವಳದ ಟ್ರಸ್ಟಿಗಳಾದ ಸುಧೀರ್ ರಾವ್ ಕೊಡವೂರು ,ಜೀವನ್ ಪಾಳೆಕಟ್ಟೆ,ಗೋವಿಂದ ಪಾಲನ್ ಉಪಸ್ಥಿತರಿದ್ದರು


Spread the love