ಕೊಡವೂರು ಬ್ರಾಹ್ಮಣ ಮಹಾ ಸಭಾ ದಿಂದ ಆನ್ ಲೈನ್ ಮೂಲಕ ರಾಷ್ಟ್ರೀಯ ವೈದ್ಯರ ದಿನಾಚರಣೆ

Spread the love

ಕೊಡವೂರು ಬ್ರಾಹ್ಮಣ ಮಹಾ ಸಭಾ ದಿಂದ ಆನ್ ಲೈನ್ ಮೂಲಕ ರಾಷ್ಟ್ರೀಯ ವೈದ್ಯರ ದಿನಾಚರಣೆ

ಮಲ್ಪೆ: ಭಾರತಾದ್ಯಂತ ಜುಲೈ 1 ನ್ನು ವೈದ್ಯರ ದಿನ ಆಚರಿಸುತ್ತಿರುವ ಹಿನ್ನಲೆಯಲ್ಲಿ ‌ಕೋವಿಡ್ 19 ಸಂದಿಗ್ಧತೆಯ ಈ ಸಮಯದಲ್ಲಿ‌ ಕೊಡವೂರು ‌ಬ್ರಾಹ್ಮಣ ಮಹಾ ಸಭಾ ವಿಶೇಷ ಕಾರ್ಯಕ್ರಮ ವನ್ನು ಆಯೋಜಿಸಿದೆ. ಇಪ್ಪತ್ತೈದು ವರುಷಗಳ ಸಂಭ್ರಮ ಅಚರಣೆ – “ರಜತ ಪಥದಲ್ಲಿ ವಿಪ್ರ ಹೆಜ್ಜೆ” ಸರಣಿ ಕಾರ್ಯಕ್ರಮದಲ್ಲಿ 6ನೇ ಕಾರ್ಯಕ್ರಮವಾಗಿ ವಲಯದ ಹಿರಿಯ ಹಾಗೂ ಪ್ರಸಿದ್ಧ ವೈದ್ಯ ಡಾ|| ಏ ಆರ್ ಆಚಾರ್ಯರಿಗೆ ಸನ್ಮಾನ ಮತ್ತು ವಲಯದ ಇತರ ವೈದ್ಯರಿಗೆ ಅವರ ನಿಸ್ವಾರ್ಥ ಸೇವೆಗಾಗಿ ವೀಡಿಯೋ ಸಂದೇಶದ ಮೂಲಕ ಶುಭಾಶಯಗಳನ್ನು ಕೋರಲಾಯಿತು.

ಇದೇ ಸಂದರ್ಭದಲ್ಲಿ ಡಾ|| ಏ ಆರ್ ಆಚಾರ್ಯರಿಂದ “ಆರೋಗ್ಯಕರ ಜೀವನಕ್ಕೆ ಆಯುರ್ವೇದ ಸೂತ್ರಗಳು” ಎನ್ನುವಂತ  ವಿಷಯದ ಬಗ್ಗೆ ಉಪನ್ಯಾಸವು ನಡೆದು ಕೋವಿಡ್ ನಿಯಮಾನುಸಾರವಾಗಿ ಫೇಸ್ ಬುಕ್ ಹಾಗೂ ವಾಟ್ಸಾಪ್ ನಲ್ಲಿ ಲಾಗಿನ್ ಆಗುವುದರ ಮೂಲಕ ಆನ್ ಲೈನ್ ನಲ್ಲಿ ಸದಸ್ಯರು ಮನೆಯಲ್ಲೇ ಕುಳಿತು ವೀಕ್ಷಿಸಲು ಅನುವು ಮಾಡಿಕೊಡಲಾಯಿತು.  ತನ್ನ ಉಪನ್ಯಾಸದಲ್ಲಿ ಡಾ|| ಆಚಾರ್ಯರು ಮುಂಜಾನೆ ಏಳುವ ಸಮಯ, ದಂತ ಮಜ್ಜನ, ವ್ಯಾಯಾಮ ಹಾಗೂ ಯೋಗ, ಅಭ್ಯಂಜನ, ಆಹಾರ ಪದ್ಧತಿಯ ಬಗ್ಗೆ ಹಾಗೂ ದಿನ ನಿತ್ಯ ನಾವು ಅನುಸರಿಸಬೇಕಾಗಿರುವ ಉಪಯುಕ್ತ ಮಾಹಿತಿಯನ್ನು ನೀಡಿದರು.  ಮುಖ್ಯವಾಗಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದರ ಮೂಲಕ ಹಲವಾರು ರೋಗ ರುಜಿನಗಳನ್ನು ದೂರವಿಡಬಹುದು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೊಡವೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀ ನಾರಾಯಣ ಬಲ್ಲಾಳ್, ಕಾರ್ಯದರ್ಶಿ ಶ್ರೀ ಶ್ರೀನಿವಾಸ ಬಾಯರಿ, ರಜತೋತ್ಸವ ಸಮಿತಿಯ ಕೋಶಾಧಿಕಾರಿ ಶ್ರೀ ಶ್ರೀಧರ ಶರ್ಮ, ಶ್ರೀ ಪ್ರಸನ್ನ ಕೊಡವೂರು ಅತಿಥಿಗಳನ್ನು ಸನ್ಮಾನಿಸಿದರು. ರಜತೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರಶೇಖರ್ ರಾವ್ ಕೊಡವೂರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು ಹಾಗೂ  ಕಾರ್ಯಾಧ್ಯಕ್ಷ ಮಂಜುನಾಥ ಭಟ್ ಅತಿಥಿಗಳಿಗೆ ಅಭಿನಂದನೆ ಸಲ್ಲಿಸಿ ವಂದಿಸಿದರು.


Spread the love