ಕೊಡವೂರು ಶಂಕರನಾರಾಯಣ ದೇವಸ್ಥಾನ – ರಾಶಿಪೂಜಾ ಮಹೋತ್ಸವಕ್ಕೆ ಸಿದ್ಧತೆ ಪೂರ್ಣ

Spread the love

ಕೊಡವೂರು ಶಂಕರನಾರಾಯಣ ದೇವಸ್ಥಾನ – ರಾಶಿಪೂಜಾ ಮಹೋತ್ಸವಕ್ಕೆ ಸಿದ್ಧತೆ ಪೂರ್ಣ

ಉಡುಪಿ: ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಫೆಬ್ರವರಿ 4ರಂದು ಲೋಕ ಕಲ್ಯಾಣಾರ್ಥವಾಗಿ ನಡೆಯಲಿರುವ ಅಪರೂಪದ ದೊಂದಿ ಬೆಳಕಿನ ರಾಶಿ ಪೂಜೆಗೆ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ.

ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ದೇವರ ದರ್ಶನ, ಪಾರ್ಕಿಂಗ್, ಶೌಚಾಲಯದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದ್ದು, ಅನ್ನ ಪ್ರಸಾದಕ್ಕೆ ವಿಶಾಲವಾದ ಚಪ್ಪರವ್ನು ಹಾಕಲಾಗಿದೆ.

ದೇವಳದ ತಂತ್ರಿ ವೇ|ಮೂ|ಪುತ್ತೂರು ಹಯವದನ ತಂತ್ರಿಗಳು ಹಾಗೂ ಋತ್ವಿಜರೊಡಗೂಡಿ ಆಗಮೋಕ್ತ ವಿಧಿ ವಿಧಾನಗಳೊಂದಿಗೆ ಫೆ.4ರ ಸೂರ್ಯೋದಯದಿಂದ ಫೆ.5 ಸೂರ್ಯೋದಯ ಪರ್ಯಂತ ನಡೆಯಲಿರುವುದು. ಬೆಳಗ್ಗೆ ರಾಶಿಪೂಜಾ ಕಲಶಾಧಿವಾಸ, ಆಧಿವಾಸ ಯಾಗ, ಸಂಕಲ್ಪ, ಭಾರತಿ ಪೂಜೆ, ಆರೂರು ಶ್ರೀ ವಿಷ್ಣುಮೂರ್ತಿ ಸಂಕಿರ್ತನೆ ತಂಡದಿಂದ ದೇವರ ನಾಮ ಸಂಕೀರ್ತನೆ ಪ್ರಾರಂಭವಾಗಲಿದೆ.

6.55ಕ್ಕೆ ಮಕರ ಲಗ್ನದಲ್ಲಿ ರಾಶಿ ಪೂಜೆ ಪ್ರಾರಂಭ, ಮಧ್ಯಾಹ್ನ 12 ಕ್ಕೆ ಮಹಾಪೂಜೆಯಾಗಿ ಮಹಾ ಅನ್ನ ಸಂತರ್ಪಣೆ ನಡೆಯಲಿರುವುದು. ಫೆ. 5 ರಂದು ಬೆಳಗ್ಗೆ ಉದ್ಯಾಪನ ಬಲಿ, ಪ್ರಸನ್ನ ಪೂಜೆ, ಪ್ರಸಾದ ವಿತರಣೆಯಾಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಫೆ. 4 ರಂದು ಮಧ್ಯಾಹ್ನ ರೋಹಿತ್ ಮಲ್ಪೆ ಮತ್ತು ಬಳಗದವರಿಂದ ಭಾವಯಾನ ಸುಗಮ ಸಂಗೀತ, ರಾತ್ರಿ 7.30 ರಿಂದ ಹಟ್ಟಿಯಂಗಡಿ ಮೇಳದವರಿಂದ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಲಿರುವುದು.

ಮಧ್ಯಾಹ್ನ ಮತ್ತು ರಾತ್ರಿ ಅನ್ನಪ್ರಸಾದ ವಿತರಣೆಯಾಗಲಿದ್ದ ಸುಮಾರು 20ಸಾವಿರಕ್ಕೂ ಅಧಿಕ ಮಂದಿ ಭಕ್ತರು ರಾಶಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬೆಳಗ್ಇನಿಂದ ರಾತ್ರಿಯವರೆಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಹಾಗೂ ರಾಶಿ ಪೂಜಾ ಮಹೋತ್ಸವ ಸೇವಾ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್ ತಿಳಿಸಿದ್ದಾರೆ.


Spread the love