
Spread the love
ಕೊಡಿಯಲ್ ಬೈಲ್ ವಾರ್ಡ್ ನಲ್ಲಿ ಕಾಂಗ್ರೆಸ್ ಪಕ್ಷದ ಬಿರುಸಿನ ಪ್ರಚಾರ
ಮಂಗಳೂರು ಮಹಾನಗರಪಾಲಿಕೆಯ 30ನೇ ಕೋಡಿಯಲ್ ಬೈಲ್ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಬಿರುಸಿನ ಪ್ರಚಾರ ನಡೆಯಿತು.
ಮಾಜಿ ಶಾಸಕರು ಹಾಗೂ ಪಕ್ಷದ ಅಭ್ಯರ್ಥಿ ಜೆ. ಆರ್. ಲೋಬೊ ರವರು ಈ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಚಂದ್ರಿಕಾ ಬಡಾವಣೆ, ಕದ್ರಿ ಗುಡ್ಡೆ, ಗ್ರೆಟ್ಟಾ ಬಾಯಿ ಕಾಂಪೌಂಡ್ ಪರಿಸರದ ಮನೆಗಳಿಗೆ ಭೇಟಿ ನೀಡಿ ಜನರಿಗೆ ಮನವಿ ಮಾಡಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಬೇಕೆಂದು ಮನವಿಮಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರು, ಮಾಜಿ ಎಂಎಲ್ ಸಿ ಐವನ್ ಡಿಸೋಜಾ, ಮಂಗಳೂರು ನಗರ ಬ್ಲಾಕ್ ಅಧ್ಯಕ್ಷರು, ಮಾಜಿ ಕಾರ್ಪೊರೇಟರ್ ಪ್ರಕಾಶ್ ಬಿ. ಸಾಲ್ಯಾನ್, ವಾರ್ಡ್ ಅಧ್ಯಕ್ಷ ದೇವಿ ಪ್ರಸಾದ್, ಪ್ರಮುಖರಾದ ರಘುರಾಜ್ ಕದ್ರಿ, ವಿಕಿತ್, ವಿಕಾಸ್ ಶೆಟ್ಟಿ, ಪ್ರಜ್ವಲ್, ದಿನೇಶ್, ಸುರೇಶ, ನಾನ್ಸಿ, ಸ್ವಸಿಕ್ ಮೊದಲಾದವರು ಉಪಸ್ಥಿತರಿದ್ದರು.
Spread the love