Home Mangalorean News Kannada News ಕೊಣಾಜೆಯಲ್ಲಿ `ಘರ್‍ವಾಪಸ್ಸಿ’! ಕ್ರಿಶ್ಚಿಯನ್ ಕುಟುಂಬದ ಐದು ಜನ ಮರಳಿ ಹಿಂದೂ ಧರ್ಮಕ್ಕೆ

ಕೊಣಾಜೆಯಲ್ಲಿ `ಘರ್‍ವಾಪಸ್ಸಿ’! ಕ್ರಿಶ್ಚಿಯನ್ ಕುಟುಂಬದ ಐದು ಜನ ಮರಳಿ ಹಿಂದೂ ಧರ್ಮಕ್ಕೆ

Spread the love

ಕೊಣಾಜೆ: ಕೊಣಾಜೆ ಮುಚ್ಚಿಲಕೋಡಿ ಎಂಬಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕುಟುಂಬವೊಂದರ ಐದು ಜನ ಸದಸ್ಯರು ಹಿಂದೂ ಸಂಘಟನೆಯ ಕಾರ್ಯಕರ್ತರ ಸಮ್ಮುಖದೊಂದಿಗೆ ಮರಳಿ ಹಿಂದೂ ಧರ್ಮಕ್ಕೆ ಬುಧವಾರ ಮತಾಂತರಗೊಂಡಿದ್ದಾರುವ ಘಟನೆ ಬೆಳಕಿಗೆ ಬಂದಿದೆ.

ಸರಸ್ವತಿ, ರಾಜೇಶ್(22), ರಾಜಿ(25), ರತಿ(23), ರಾಕೇಶ್(18) ಎಂಬವರೇ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡವರಾಗಿದ್ದಾರೆ.

ಬುಧವಾರದಂದು ಕೊಣಾಜೆಯ ಮನೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರ ಸಮ್ಮುಖದಲ್ಲಿ ಪೂಜಾ ವಿಧಿ ವಿಧಾನದ ಮೂಲಕ ಕ್ರಿಶ್ಚಿಯನ್ ಕುಟುಂಬದ ಐದು ಜನ ಸದಸ್ಯರೂ ಕೂಡಾ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

Ghar-wapsi-08052015

ಕೇರಳದ ಕೊಲ್ಲಂ ಬಳಿ ವಾಸವಾಗಿದ್ದ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ರಾಜು ಎಂಬವರು ತನ್ನ ಮನೆ ಸಮೀಪದ ಹಿಂದು ಧರ್ಮದ ಸರಸ್ವತಿ ಎಂಬವರನ್ನು ಪ್ರೀತಿಸಿ ಸುಮಾರು 30 ವರ್ಷಗಳ ಹಿಂದೆ ವಿವಾಹವಾಗಿದ್ದರು. ಮದುವೆಯಾದ ಬಳಿಕ ಹಿಂದೂ ಧರ್ಮಕ್ಕೆ ಸೇರುತ್ತೇನೆ ಎಂದು ಹೇಳಿದ್ದ ರಾಜು ಅವರು ಬಳಿಕ ಪತ್ನಿ ಸರಸ್ವತಿ ಅವರನ್ನು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿಸಿದ್ದರು. ಬಳಿಕ ಅವರು ಕೇರಳದ ಕೊಲ್ಲಂನಿಂದ ಕೊಣಾಜೆಯ ಮುಚ್ಚಿಲಕೋಡಿಯಲ್ಲಿ ವಾಸವಾಗಿ ಇಲ್ಲೇ ಕೆಲಸ ಮಾಡಿಕೊಂಡಿದ್ದರು. ಇಲ್ಲಿ ಅವರಿಗೆ 2 ಗಂಡು ಹಾಗೂ 2 ಹೆಣ್ಣು ಮಕ್ಕಳು ಜನಿಸಿ ಅವರು ಕೂಡಾ ಕ್ರೈಸ್ತ ಧರ್ಮದ ಪ್ರಾರ್ಥನಾಲಯಕ್ಕೆ ಹೋಗಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಒಂಭತ್ತು ವರ್ಷದ ಹಿಂದೆ ರಾಜು ಅವರು ಅನಾರೋಗ್ಯದಿಂದ ತೀರಿಹೋಗಿದ್ದು ಬಳಿಕವೂ ಕೂಡಾ ಕುಟುಂಬದ ಸದಸ್ಯರು ಕ್ರೈಸ್ತ ಪ್ರಾರ್ಥನಾಲಯಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.

ತಂದೆ ರಾಜು ಅವರು ಮೃತರಾದ ಬಳಿಕ ಕೆಲವರ್ಷ ಚರ್ಚ್ ಹೋಗುತ್ತಿದ್ದೆವು. ಬಳಿಕ ಹೋಗುತ್ತಿರಲಿಲ್ಲ. ಪರಿಸರದಲ್ಲಿ ನಮ್ಮನ್ನು ಎಲ್ಲರೂ ಕ್ರಿಶ್ಚಿಯನ್ ಸಮುದಾಯದವರೆಂದೇ ಗುರುತಿಸಿಕೊಂಡಿದ್ದಾರೆ. ಇದೀಗ ನನಗೆ ಹಲವಾರು ಹಿಂದೂ ಸಂಘಟನೆಯ ಗೆಳೆಯರು ಇದ್ದಾರೆ. ಅಲ್ಲದೆ ನಾವು ಎಲ್ಲ ಕಡೆಯೂ ಬಿಲ್ಲವ ಎಂದೇ ಗುರುತಿಸುತ್ತೇವೆ. ಮತಾಂತರ ಕಾರ್ಯಕ್ರಮವು ಯಾವುದೇ ಒತ್ತಾಯದಿಂದ ನಡೆದಿಲ್ಲ ನಮ್ಮ ಸ್ವಂತ ಹಿತಾಸಕ್ತಿಯಿಂದ ಆಗಿದೆ ಎಂದು ಸರಸ್ವತಿ ಅವರ ಮಗ ರಾಜೇಶ್ ಅವರ ಅಭಿಪ್ರಾಯ.

ಪೂಜಾ ಕಾರ್ಯಕ್ರಮದ ಬಳಿಕ ಮನೆಯಲ್ಲಿ ತುಳಿಸಿಕಟ್ಟೆಯನ್ನು ಸ್ಥಾಪಿಸಿ ಮನೆಯೊಳಗೆ ಹಿಂದೂ ದೇವರ ಫೋಟೋವನ್ನು ಇಡಲಾಗಿದೆ.

ಹಲ್ಲೆ ಪ್ರಕರಣ: ಮತಾಂತರಗೊಂಡ ರಾಜೇಶ್ ಕಳೆದ ಕೆಲವು ವರ್ಷದಿಂದ ಬಂಟ್ವಾಳ ತಾಲೂಕಿನ ಇರಾದ ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ. ಆರ್ಯ ಸಮಾಜದಲ್ಲಿ ಮದುವೆಯಾಗುವುದೆಂದೂ ತೀರ್ಮಾನಿಸಲಾಗಿತ್ತು. ಕಳೆದ ಒಂದುವರೇ ತಿಂಗಳಿನ ಹಿಂದೆ ಇರಾದಲ್ಲಿರುವ ಆಕೆಯ ಮನೆಗೆ ರಾಜೇಶ್ ಹಾಗೂ ಆತನ ಅಕ್ಕ ತೆರಳಿದ್ದಾಗ ಅಲ್ಲಿಯ ಸ್ಥಳೀಯರು ಸೇರಿ ನೀವು ಆಕೆಯನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತೀರಾ ಎಂದು ಆರೋಪಿಸಿ ಹಲ್ಲೆ ನಡೆಸಿದ್ದರು. ಈ ಪ್ರಕರಣ ಬಂಟ್ವಾಳ ಪೋಲೀಸ್ ಠಾಣೆಯ ಮೆಟ್ಟಿಲನ್ನೇರಿತ್ತು.


Spread the love

Exit mobile version