ಕೊಣಾಜೆ ಭಜನಾ ಮಂದಿರ ಅಪವಿತ್ರಗೊಳಿಸಿದ ಪ್ರಕರಣ: ಇಬ್ಬರ ಸೆರೆ

Spread the love

ಕೊಣಾಜೆ ಭಜನಾ ಮಂದಿರ ಅಪವಿತ್ರಗೊಳಿಸಿದ ಪ್ರಕರಣ: ಇಬ್ಬರ ಸೆರೆ

ಮಂಗಳೂರು: ನಗರದ ಹೊರವಲಯದ ಕೊಣಾಜೆಯಲ್ಲಿ ಆತಂಕ ಮೂಡಿಸಿದ್ದ ಹಲವು ದೇವಾಸ್ಥಾನಗಳ ಕಾಣಿಕೆ ಹುಂಡಿ ಕಳವು ಮತ್ತು ಭಗವಧ್ವಜ ಅಪವಿತ್ರಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ತಲಪಾಡಿ ಕೆ ಸಿ ರೋಡ್ ನ ಮೊಹಮ್ಮದ್ ಸುಹೈಲ್ ಮತ್ತು ನಿಝಾಮುದ್ದೀನ್ ಬಂಧಿತ ಆರೋಪಿಗಳು.

ಜ.26ರಂದು ಆರೋಪಿಗಳು ಸಂಶಯಾಸ್ಪದವಾಗಿ ತಿರುಗಾಡುವುದನ್ನು ಕಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾವು ನಡೆಸಿದ ಕೃತ್ಯಗಳ ಬಗ್ಗೆ ಒಪ್ಪಿಕೊಂಡಿದ್ದಾರೆ.

ಕಳೆದ ನವೆಂಬರ್ ನಲ್ಲಿ ಕೊಣಾಜೆ ಮುಲಾರದ ಅರಸು ಮಂಡಿತ್ತಾಯ ದೈವ್ಥಾನದ ಕಾಣಿಕೆ ಡಬ್ಬಿ, ಜ.15ರಂದು ಮಾಡೂರಿನಲ್ಲಿ ಕಾಣಿಕೆ ಡಬ್ಬಿ, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸೇವಾ ಕೌಂಟರ್ ಕಳ್ಳತನ, ಕುತ್ತಾರು ಕೊರಗಜ್ಜ ದೇವಸ್ಥಾನದಲ್ಲಿ ಕಳ್ಳತನ ಯತ್ನ ಮತ್ತು ಕೊಣಾಜೆ ಪೆರಂಡೆಯಲ್ಲಿನ ಗೋಪಾಲಕೃಷ್ಣ ಮಂದಿರದಲ್ಲಿ ಭಗವಧ್ವಜಕ್ಕೆ ಮಲಮೂತ್ರ ಮಾಡಿ ಅಪವಿತ್ರಗೊಳಿಸಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.

ಇವರುಗಳಿಂದ ಸುಮಾರು 35 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.


Spread the love

1 Comment

Comments are closed.