ಕೊನೆಗೂ ಸಾರಿಗೆ ನೌಕರರ ಮುಷ್ಕರ ಅಂತ್ಯ

Spread the love

ಕೊನೆಗೂ ಸಾರಿಗೆ ನೌಕರರ ಮುಷ್ಕರ ಅಂತ್ಯ

ಬೆಂಗಳೂರು: ನಾಲ್ಕು ಸಾರಿಗೆ ನಿಗಮಗಳ ನೌಕರರು ಐದು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಕೊನೆಗೂ ವಾಪಾಸ್ ಪಡೆದಿದ್ದು, ಸೋಮವಾರ ಸಂಜೆಯಿಂದಲೇ ಎಲ್ಲಾ ಬಸ್ ಗಳ ಸಂಚಾರ ಆರಂಭವಾಗಲಿದೆ.

ರಾಜ್ಯ ಸರ್ಕಾರ ಸಂಧಾನ ಸಭೆಯ ನಡಾವಳಿಗಳನ್ನು ಲಿಖಿತವಾಗಿ ಸಲ್ಲಿಸಿದ ಬಳಿಕವೂ ನೌಕರರು ತಕಾರಾರು ಎತ್ತಿದ್ದರು. ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಪಟ್ಟು ಹಿಡಿದರು ಪರಿಣಾಮ ಮತ್ತೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಬಳಿಕ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರೊಂದಿಗೆ ಕೋಡಿ ಹಳ್ಳಿ ಚಂದ್ರಶೇಖರ್ ಮಾತುಕತೆ ನಡೆಸಿದರು. ನಂತರವೂ ನೌಕರರು ಮುಷ್ಕರ ಹಿಂಪಡೆಯಲು ಒಪ್ಪಲಿಲ್ಲ. ನೌಕರರ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ಮನವೊಲಿಕೆ ನಡೆಸಿದ ಕೋಡಿ ಹಳ್ಳಿ ಚಂದ್ರಶೇಖರ್ ಅಂತಿಮವಾಗಿ ಮುಷ್ಕರ ವಾಪಾಸ್ ಪಡೆಯುವ ನಿರ್ಧಾರ ಪ್ರಕಟಿಸಿದರು.


Spread the love