ಕೊಪ್ಪಳ ಜಿಲ್ಲೆಯ ಕುಷ್ಟಗಿ ಬಳಿ ಭೀಕರ ರಸ್ತೆ ಅಪಘಾತ: 6 ಜನರ ಸಾವು

Spread the love

ಕೊಪ್ಪಳ ಜಿಲ್ಲೆಯ ಕುಷ್ಟಗಿ ಬಳಿ ಭೀಕರ ರಸ್ತೆ ಅಪಘಾತ: 6 ಜನರ ಸಾವು
 

ಕುಷ್ಟಗಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯ ಕಲಕೇರಿ ಬಳಿ ಭಾನುವಾರ ಸಂಜೆ ಲಾರಿ ಮತ್ತು ಕಾರು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಮಕ್ಕಳು, ಮಹಿಳೆ ಸೇರಿ ಕಾರಿನಲ್ಲಿದ್ದ 6 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಮೃತಪಟ್ಟವರು ವಿಜಯಪುರ ಮೂಲದವರು ಎಂದು ಗೊತ್ತಾಗಿದೆ. ತಮಿಳುನಾಡಿನ ಲಾರಿ ಗುಜರಾತ್ ಕಡೆಗೆ ತೆರಳುತ್ತಿತ್ತು, ಟಾಟಾ ಇಂಡಿಕಾ ಕಾರು ವಿಜಯಪುರದಿಂದ ಬೆಂಗಳೂರು ಕಡೆಗೆ ತೆರಳುವಾಗ ಅಪಘಾತ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಲಾರಿಯ ಕೆಳಭಾಗದ ಒಳಗಡೆ ನುಗ್ಗಿದೆ.

ಪೊಲೀಸರ ಮಾಹಿತಿ ಪ್ರಕಾರ ರಾಚಪ್ಪ ಬನಸೋಡೆ, ರಾಘವೇಂದ್ರ ಕಾಂಬಳೆ, ಅಕ್ಷಯ ಶಿವಶರಣ, ಜಯಶ್ರೀ ಕಾಂಬಳೆ, ರಾಕಿ, ರಶ್ಮಿಕಾ ಮೃತಪಟ್ಟವರು. ಕಾರಿನ ಒಳಗೆ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಕ್ರೇನ್‌ ಮೂಲಕ ಹೊರ ತೆಗೆದು ಪಟ್ಟಣದ ಆಸ್ಪತ್ರೆಗೆ ಸಾಗಿಸಲಾಗಿದೆ.


Spread the love