ಕೊರೊನಾದಿಂದ ಒಂದೇ ದಿನ ಮೃತರಾದ 4 ಹಿಂದೂಗಳ ಅಂತ್ಯಕ್ರಿಯೆ ನಡೆಸಿದ ಟೀಂ- ಬಿ ಹ್ಯೂಮೆನ್ ಮತ್ತು ಐ.ವೈ.ಸಿ ಯೂತ್ ತಂಡ

Spread the love

ಕೊರೊನಾದಿಂದ ಒಂದೇ ದಿನ ಮೃತರಾದ 4 ಹಿಂದೂಗಳ ಅಂತ್ಯಕ್ರಿಯೆ ನಡೆಸಿದ ಟೀಂ- ಬಿ ಹ್ಯೂಮೆನ್ ಮತ್ತು ಐ.ವೈ.ಸಿ ಯೂತ್ ತಂಡ

ಮಂಗಳೂರು: ಕೊರೊನಾ ಸಂಕಷ್ಟದ ಕಾಲದಲ್ಲೂ ಧರ್ಮ ರಾಜಕಾರಣ ಮಾಡುತ್ತಿರುವ ಹೊಣೆಗೇಡಿ ರಾಜಕಾರಣಿಗಳು ಒಂದೆಡೆಯಾದರೆ, ಕೊರೊನಾ ಸೋಂಕಿತ ಮೃತದೇಹದ ಬಳಿ ಆಪ್ತ ಸಂಬಂಧಿಕರೂ ಸುಳಿದಾಡದ ಸನ್ನಿವೇಶದಲ್ಲಿ ಮೃತರ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸುವ ಮೂಲಕ ಮಂಗಳೂರಿನ ಟೀಂ- ಬಿ ಹ್ಯೂಮನ್ ಹಾಗೂ ಟೀಂ ಐ ವೈ ಸಿ ಯೂತ್ ತಂಡ ಮಾನವೀಯತೆ ಮೆರೆದಿದೆ.

ಇಂದು ನಗರದ ವೆನ್ಲಾಕ್ ಆಸ್ಪತ್ರೆ ಯಲ್ಲಿ ಕೊರೊನಾ ಪೀಡಿತರಾಗಿ ಮೃತಪಟ್ಟವರ ದೇಹವನ್ನು ಸಂಬಂಧಿಕರೇ ಮುಟ್ಟಲು ಭಯಪಟ್ಟಾಗ, ಅಲ್ಲಿಗೆ ಧಾವಿಸಿದ ಟೀಂ – ಬಿ ಹ್ಯೂಮನ್ ನ ಆಸಿಫ್ ಡೀಲ್ಸ್ ಮತ್ತು ಅವರ ಸಹೋದರ ಐವೈಸಿ ಯೂತ್ ತಂಡದ ಸುಹೈಲ್ ಕಂದಕ್ ನಾಲ್ಕು ಮೃತದೇಹಗಳನ್ನು ಬೊಲೂರು, ಕದ್ರಿ, ನಂದಿಗುಡ್ಡೆಯ ಸ್ಮಶಾನದಲ್ಲಿ ಗೌರವಪೂರ್ಣವಾಗಿ ಅಂತ್ಯಕ್ರಿಯೆ ನಡೆಸಿದ್ದಾರೆ.

ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಟೀಂ ಬಿ ಹ್ಯೂಮೆನ್ ತಂಡವು ನಗರದ ಆಸ್ಪತ್ರೆಗಳು ಮತ್ತು ರೋಗಿಗಳೊಂದಿಗೆ ನಿರಂತರ ಸಂಪರ್ಕವನ್ನಿರಿಸಿ, ಅವರಿಗೆ ಅಗತ್ಯ ನೆರವು ನೀಡುತ್ತಿದೆ. ಪ್ರತೀ ದಿನ ಮೃತರಾಗುತ್ತಿರುವವರ ಅಂತ್ಯಕ್ರಿಯೆಯನ್ನು ಜಾತಿ, ಮತ, ಧರ್ಮ ಭೇದವಿಲ್ಲದೆ ನಡೆಸುತ್ತಿದೆ.

ಮಂಗಳೂರಿನಲ್ಲಿ ಕೊರೊನಾದ ಆತಂಕ ದಿನೇ ದಿನೇ ಹೆಚ್ಚುತ್ತಿದ್ದು, ಮೃತರ ಸಂಖ್ಯೆಯು ಅಧಿಕವಾಗುತ್ತಿದೆ. ಐಸಿಯು ಮತ್ತು ವೆಂಟಿಲೇಟರ್ ಇಲ್ಲದೇ ಆಂಬುಲೆಂನ್ಸ್ ನಲ್ಲಿ ಉಸಿರಾಡಲು ಸಾಧ್ಯವಾಗದೆ ಕೊನೆಯುಸಿರೆಳೆಯುವ ದುರಂತವೂ ನಡೆಯುತ್ತಿದೆ. ಹಾಗಾಗಿ ಜನರು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕಾದ ಅಗತ್ಯವಿದೆ.

ಮೃತಪಟ್ಟ ವ್ಯಕ್ತಿಗಳ ಶವವನ್ನೂ ಅವರ ಸಂಬಂಧಿಕರು‌ ಮುಟ್ಟಲು ಭಯಪಡುವಂತಹ ಕರುಣಾಜನಕ ಸ್ಥಿತಿ ನಿರ್ಮಾಣ ವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಬದುಕನ್ನು ಸುರಕ್ಷಿತಗೊಳಿಸಬೇಕಾದ ಅಗತ್ಯವಿದೆ ಎಂದು ಆಸಿಫ್ ಡೀಲ್ಸ್ ತಿಳಿಸಿದ್ದಾರೆ

ಇಂದು ಬೆಂಗಳೂರು, ಬೆಳ್ತಂಗಡಿ, ಮಂಗಳಾದೇವಿ, ಕಂದಾವರ ಗುರುಪುರದ ನಾಲ್ಕು ವ್ಯಕ್ತಿಗಳ ಅಂತಿಮ ಸಂಸ್ಕಾರ ಮಾಡಿರುವ ಟೀಂ – ಹ್ಯೂಮೆನ್ ನ ತಂಡದಲ್ಲಿ ಆಸಿಫ್ ಡೀಲ್ಸ್, ಅಶ್ರಫ್ ಕಂದಕ್, ಇಮ್ರಾನ್, ಅಹ್ನಾಫ್ ಡೀಲ್ಸ್, ವಾಹಿದ್ ಹಾಗೂ ಐವೈಸಿ ಯೂತ್ ತಂಡದಲ್ಲಿ ಸುಹೈಲ್ ಕಂದಕ್, ಲುಕ್ಮಾನ್, ಹಸನ್ ಡೀಲ್ಸ್, ದೀಕ್ಷಿತ್, ಅಪ್ಪಿ, ಬಾಚಿ ಭಾಗವಹಿಸಿದ್ದರು.


Spread the love

2 Comments

  1. Where is RSS and Bajarang Dal Mr. MLA and MP. You all make communal and hate politics and send your team for protest immediately. Hope the majority community will understand their protector are only behind power and when in need they are nowhere.

Comments are closed.