ಕೊರೊನಾ ವೈರಸ್ ಬಗ್ಗೆ ಗಾಬರಿ ಬೇಡ; ಮುಂಜಾಗ್ರತೆ ಅಗತ್ಯ, ನಾಳೆ ಮಾರ್ಗಸೂಚಿ ಬಿಡುಗಡೆ-   ಬೊಮ್ಮಾಯಿ

Spread the love

 ಕೊರೊನಾ ವೈರಸ್ ಬಗ್ಗೆ ಗಾಬರಿ ಬೇಡ; ಮುಂಜಾಗ್ರತೆ ಅಗತ್ಯ, ನಾಳೆ ಮಾರ್ಗಸೂಚಿ ಬಿಡುಗಡೆ-   ಬೊಮ್ಮಾಯಿ

ಬೆಂಗಳೂರು:  ಕೊರೊನಾದ ಬಗ್ಗೆ ಗಾಬರಿಯಾಗಬೇಕಾಗಿಲ್ಲ. ಆದರೆ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಇಲ್ಲಿ ತಿಳಿಸಿದರು.

ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ ಕೊರೊನಾ ಬಗ್ಗೆ ಆರೋಗ್ಯ ಸಚಿವರು ಮತ್ತು ವಿಪತ್ತು ನಿರ್ವಹಣಾ ಸಚಿವರ ಚರ್ಚಿಸಲಿದ್ದಾರೆ. ಕೇಂದ್ರದಿಂದ ಕೆಲವು ಮಾರ್ಗಸೂಚಿಗಳು ಬಂದಿದ್ದು, ರಾಜ್ಯ ಸರ್ಕಾರದಿಂದಲೂ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು. ಈ ಕುರಿತು ನಾಳೆ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆದ ಬೆಳವಣಿಗೆಗಳ ಪರಿಣಾಮ ದೇಶ ಹಾಗೂ ರಾಜ್ಯದ ಮೇಲೂ ಆಗಿವೆ. ಈ ಹಿನ್ನೆಲೆಯಲ್ಲಿ ನಾಳೆಯ ಸಭೆಯಲ್ಲಿ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.


Spread the love