
ಕೊರೊನಾ ಸೋಂಕಿನ ಪಾಸಿಟಿವಿಟಿ ದರ ಕಡಿಮೆಯಾಗಬೇಕಾದರೆ ಜನರ ಸಹಕಾರ ಬೇಕು – ಜಿಲ್ಲಾಧಿಕಾರಿ ಜಿ. ಜಗದೀಶ್
ಕುಂದಾಪುರ: ಕೊರೊನಾ ಸೋಂಕಿನ ಪಾಸಿಟಿವಿಟಿ ದರ ಕಡಿಮೆಯಾಗಬೇಕಾದರೆ ಜನರ ಸಹಕಾರ ಅಗತ್ಯವಾಗಿ ಬೇಕು. ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ನಾವು ಸರಿಯಾಗಿ ಪಾಲನೆ ಮಾಡದೆ ಇದ್ದಲ್ಲಿ ಸೋಂಕು ಪ್ರಮಾಣ ಇಳಿಕೆಯಾಗಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗುತ್ತಿದ್ದರೂ, ನಮ್ಮ ನಿರೀಕ್ಷೆಗೆ ಅನುಗುಣವಾಗಿ ಕಡಿಮೆಯಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಬುಧವಾರ ಉಪ ವಿಭಾಗದ ಸರ್ಕಾರಿ ಆಸ್ಪತ್ರೆಯ ವಠಾರದಲ್ಲಿ ನಿರ್ಮಾಣವಾಗುತ್ತಿರುವ ಅಮ್ಲಜನಕ ಸ್ಥಾವರ ಘಟಕದ ಕಾಮಗಾರಿ ಪರಿಶೀಲನೆ ಬಳಿಕ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಶಾಸಕರ ಅಭಿಪ್ರಾಯಗಳನ್ನು ಪಡೆದುಕೊಂಡು, ೫೦ ಕ್ಕಿಂತ ಹೆಚ್ಚುಸೋಂಕಿತರ ಪ್ರಕರಣಗಳಿರುವ ೩೫ ಗ್ರಾಮ ಪಂಚಾಯಿತಿಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ಹೆಚ್ಚುತ್ತಿರುವ ಕೆಲವೊಂದು ಗ್ರಾಮ ಪಂಚಾಯಿತಿಗಳು, ಸ್ವ ಇಚ್ಚೆಯಿಂದಲೆ ಸ್ವಯಂ ನಿರ್ಧಾರವನ್ನು ಕೈಗೊಂಡು ಪೂರ್ಣ ಲಾಕ್ಡೌನ್ ಅನುಷ್ಠಾನ ಮಾಡಲಾಗುತ್ತಿದೆ. ಇಂತಹ ಪಂಚಾಯಿತಿಗಳಿಗೆ ಜಿಲ್ಲಾಡಳಿತ ನಿಮ್ಮೊಂದಿಗೆ ಇದೆ ಎಂಬ ಭರವಸೆ ಕೊಟ್ಟಿದ್ದೇವೆ ಎಂದು ಅವರು ತಿಳಿಸಿದ್ದಾರೆ.
೨-೩ ಪಂಚಾಯಿತಿಗಳಿಗೆ ಹೊಂದಿಕೊAಡಿರುವ ಹಳ್ಳಿಗಳನ್ನು ಸೀಲ್ ಡೌನ್ ಮಾಡುವ ಬಗ್ಗೆ ಪಂಚಾಯಿತಿ ಅಧ್ಯಕ್ಷರು, ಪಿಡಿಓ ಗಳೊಂದಿಗೆ ಮಾತನಾಡಿ ಮುಂದಿನ ಕ್ರಮ ಜರುಗಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಸೂಚಿಸಲಾಗಿದೆ. ಹೆಚ್ಚು ಸೋಂಕು ಪ್ರಕರಣಗಳು ಇರುವ ಹಳ್ಳಿಗಳಿಗೆ ‘ ಡಾಕ್ಟರ್ ನಡೆ, ಹಳ್ಳಿ ಕಡೆ ಯೋಜನೆ ‘ ಯಡಿಯಲ್ಲಿ ವೈದ್ಯರು ಅಲ್ಲಿಗೆ ತೆರಳುತ್ತಾರೆ. ಹಳ್ಳಿಗಳನ್ನು ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು ಎನ್ನುವ ಸೂಚನೆಗೆ ವೈದ್ಯಾಧಿಕಾರಿಗಳು ಉತ್ತಮವಾಗಿ ಸ್ವಂದಿಸುತ್ತಿದ್ದಾರೆ. ಈಗಾಗಲೇ ೬,೦೦೦ ಮಂದಿಗೆ ಸ್ಕಿçÃನಿಂಗ್ ಮಾಡಿದ್ದು, ಅದರಲ್ಲಿ ೩೦೦ ಮಂದಿಗೆ ಪಾಸಿಟಿವ್ ಬಂದಿದ್ದು, ಅದರಲ್ಲಿ ೫೦ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದರು.
ಜೂ.೭ ರ ವರೆಗೆ ಸರ್ಕಾರದ ಆದೇಶದಂತೆ ಲಾಕ್ ಡೌನ್ ಇರಲಿದೆ. ಸರ್ಕಾರದ ಆದೇಶದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಪ್ರಮಾಣ ೩೮ ರಿಂದ ೧೯ಕ್ಕೆ ಇಳಿದಿದೆ. ಜೂ. ೭ ರ ಒಳಗೆ ಪಾಸಿಟಿವಿಟಿ ದರ ೧೦ ರ ಒಳಗೆ ಬರಬೇಕು ಎನ್ನುವ ಗುರಿ ಇದೆ. ಕೊರೊನಾ ಸೋಂಕಿನ ಪಾಸಿಟಿವಿಟಿ ದರ ಕಡಿಮೆಯಾಗಬೇಕಾದರೆ ಜನರ ಸಹಕಾರ ಅಗತ್ಯವಾಗಿದೆ. ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ನಾವು ಸರಿಯಾಗಿ ಪಾಲನೆ ಮಾಡದೆ ಇದ್ದಲ್ಲಿ ಸೋಂಕು ಪ್ರಮಾಣ ಇಳಿಕೆಯಾಗಲು ಸಾಧ್ಯವಿಲ್ಲ. ಅನಾವಶ್ಯಕ ಓಡಾಟ, ಮಾರ್ಗಸೂಚಿಯ ಉಲ್ಲಂಘನೆ ಕಾರಣಗಳಿಂದಾಗಿ ಪಾಸಿಟಿವಿಟಿ ದರ ಕಡಿಮೆಯಾಗದೆ ಇದ್ದಲ್ಲಿ ಅನೀವಾರ್ಯವಾಗಿ ಲಾಕ್ಡೌನ್ ಮುಂದುವರೆಯುತ್ತದೆ. ಈ ರೀತಿಯ ಪ್ರಸಂಗ ಉದ್ಭವಿಸದೆ ಇರಲು ಸೋಂಕಿನ ಪ್ರಮಾಣ ನಿರೀಕ್ಷಿತ ಗುರಿಗೆ ಅನುಗುಣವಾಗಿ ಕಡಿಮೆಯಾಗಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಪ ವಿಭಾಗಾಧಿಕಾರಿ ಕೆ.ರಾಜು, ಉಪ ಉಪ ವಿಭಾಗ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೋ, ಕೋವಿಡ್ ಆಸ್ಪತ್ರೆಯ ನೋಡಲ್ ವೈದ್ಯಾಧಿಕಾರಿ ಡಾ.ನಾಗೇಶ್ ಇದ್ದರು.
ಗ್ರಾಮೀಣ ಭಾಗದಲ್ಲಿ ಶ್ರಮಿಕ ಹಾಗೂ ಬಡ ವರ್ಗದ ಜನರಲ್ಲಿ ಸೋಂಕಿನ ಪ್ರಮಾಣ ಕಂಡು ಬರುತ್ತಿದೆ. ಪ್ರತ್ಯೇಕ ಆರೈಕೆಯ ವ್ಯವಸ್ಥೆ ಪ್ರಮಾಣ ಕಡಿಮೆ ಇರೋದರಿಂದ ಸೋಂಕು ವಿಸ್ತರಣೆಯ ಪ್ರಮಾಣವೂ ಹೆಚ್ಚಾಗಬಹುದು. ಸೋಂಕು ದೃಢವಾದವರು ಕೂಡಲೇ ಕೋವಿಡ್ ಆರೈಕೆ ಕೇಂದ್ರಕ್ಕೆ ಸೇರ್ಪಡೆಯಾಗುವುದರಿಂದ ಸೋಂಕು ವಿಸ್ತರಣೆಯ ಹಾಗೂ ಗಂಭೀರತೆಯ ಪ್ರಮಾಣ ಕಡಿಮೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.