ಕೊರೊನಾ ಸೋಂಕು ಇಳಿಕೆ: ಕೊಡಗು ಅನ್ ಲಾಕ್

Spread the love

ಕೊರೊನಾ ಸೋಂಕು ಇಳಿಕೆ: ಕೊಡಗು ಅನ್ ಲಾಕ್

ಮಡಿಕೇರಿ: ಕಠಿಣ ಲಾಕ್ ಡೌನ್ ಗೆ ಒಳಗಾಗಿದ್ದ ಕೊಡಗು ಅನ್ ಲಾಕ್ ಆಗಿದೆ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲೆಯಂತೆಯೇ 3.0 ಮಾರ್ಗ ಸೂಚಿ ಕ್ರಮಗಳು ಜಾರಿಯಾಗಿವೆ.

ಈ ಹಿಂದೆ ರಾಜ್ಯದಲ್ಲಿ ಕೊಡಗು ಜಿಲ್ಲೆ ಹೊರತು ಪಡಿಸಿ ಅನ್ ಲಾಕ್ 3. O ಜಾರಿ ಮಾಡಲಾಗಿತ್ತು. ಈ ವೇಳೆ ಕೊಡಗಿನಲ್ಲಿ ಕೊರೊನಾ ಪಾಸಿಟಿವಿಟಿ ಹೆಚ್ಚಿತ್ತು. ಇದೀಗ ಸೋಂಕು ಇಳಿಕೆ ಕಂಡಿರುವುದರಿಂದ ಜನ ಸ್ವಲ್ಪ ಮಟ್ಟಿಗೆ ನಿರಾಳಗೊಂಡಿದ್ದಾರೆ.

ಅನ್ ಲಾಕ್ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರು ಅಧಿಸೂಚನೆ ಹೊರಡಿಸಿದ್ದು, ಕೊಡಗು ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ದರದಲ್ಲಿ ಕಡಿಮೆಗೊಂಡಿದೆ. ಹೀಗಾಗಿ ಈ ಕೂಡಲೇ ಜಾರಿಗೆ ಬರುವಂತೆ ಕೊಡಗು ಜಿಲ್ಲೆಯನ್ನು ಅನ್ ಲಾಕ್ 3.0 ಮಾರ್ಗಸೂಚಿ ಕ್ರಮಗಳ ಜಾರಿಗೊಳಿಸಿದೆ ಎಂದು ತಿಳಿಸಿದ್ದಾರೆ.

ಕೊಡಗಿನಲ್ಲಿ ದೇವಸ್ಥಾನ ಸೇರಿದಂತೆ ಇತರೆ ಚಟುವಟಿಕೆಗಳು ಸಾರ್ವಜನಿಕರಿಗೆ ಮುಕ್ತವಾಗಲಿವೆ. ಅಂಗಡಿ ಮುಂಗಟ್ಟುಗಳು ತೆರೆಯಲು ಅವಕಾಶ ಸಿಗಲಿದೆ. ಜೊತೆಗೆ ವಾರಾಂತ್ಯ ಕರ್ಪ್ಯೂ ರದ್ದುಗೊಂಡು, ನೈಟ್ ಕರ್ಪ್ಯೂ ಮಾತ್ರ ಜಾರಿಯಲ್ಲಿ ಮುಂದುವರೆಯಲಿದೆ.

ಕಳೆದ ಕೆಲವು ತಿಂಗಳಿಂದ ಜನ ಹೈರಾಣರಾಗಿದ್ದರು. ಹೊರಗಿನಿಂದ ಬಂದವರಿಂದ ಸೋಂಕು ಹೆಚ್ಚಾಗುತ್ತಿದೆ ಎಂಬ ಆರೋಪವೂ ಇತ್ತು. ಹೀಗಾಗಿ ಸ್ಥಳೀಯರು ಹೊರಗಿನಿಂದ ಬರುವ ಜನರತ್ತ ಭಯದಿಂದಲೇ ನೋಡುವ ಸ್ಥಿತಿ ಎದುರಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಪ್ರವಾಸಿಗರು ಕೊಡಗಿನತ್ತ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿದರೆ ಮತ್ತೆ ಸೋಂಕು ಹೆಚ್ಚುವ ಸಾಧ್ಯತೆಯೂ ಇಲ್ಲದಿಲ್ಲ. ಕೊರೊನಾ ಮಾರ್ಗ ಸೂಚಿಯನ್ನು ಅಳವಡಿಸಿಕೊಂಡರೆ ಒಳಿತು ಎನ್ನುವುದನ್ನು ಜನ ಮರೆಯಬಾರದು.


Spread the love