ಕೊರೊನಾ 3ನೇ ಅಲೆಯತ್ತ ಮುನ್ನೆಚ್ಚರಿಕೆ ವಹಿಸಲು ಸೂಚನೆ

Spread the love

ಕೊರೊನಾ 3ನೇ ಅಲೆಯತ್ತ ಮುನ್ನೆಚ್ಚರಿಕೆ ವಹಿಸಲು ಸೂಚನೆ

ಚಾಮರಾಜನಗರ: ಕೊರೊನಾ ಮೂರನೇ ಅಲೆ ತಡೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸುವಂತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

ಕೋವಿಡ್ ಗೆ ಸಂಬಂಧಿಸಿದ ವ್ಯಾಕ್ಸಿನೇಷನ್‌, ಕೋವಿಡ್ ಟೆಸ್ಟ್ , ಪಾಸಿಟಿವಿಟಿ, ಕೋವಿಡ್ ಪ್ರಕರಣಗಳು ಸೇರಿದಂತೆ ಗುಣಮುಖಗೊಂಡವರ ಬಗ್ಗೆ ಮಾಹಿತಿ ಪಡೆದಿದ್ದೇನೆ. 3ನೇ ಅಲೆ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳುವ ಉದ್ದೇಶದಿಂದ ಆಯಾ ತಾಲ್ಲೂಕಿನ ಶಾಸಕರು ಹಾಗೂ ಜಿಲ್ಲಾಧಿಕಾರಿ ಸಭೆ ನಡೆಸಿದ್ದಾರೆ. ಯಾವುದೇ ಸಮಸ್ಯೆ ಎದುರಾಗದಂತೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದರು.

ಆ.23 ರಂದು ಶಾಲಾ ಹಾಗೂ ಕಾಲೇಜು ಆರಂಭಗೊಳ್ಳಲಿದೆಯೇ ಎಂಬ ಪ್ರಶ್ನಗೆ ಪ್ರತಿಕ್ರಿಯಿಸಿದ ಸಚಿವರು, ಶಾಲಾ ಆರಂಭಕ್ಕೂ ಮೊದಲು ಮುನ್ನೆಚ್ಚರಿಕೆ ಕ್ರಮವಾಗಿ 18 ಮೇಲ್ಪಟ್ಟರಿಗೆ ವ್ಯಾಕ್ಸಿನೇಷನ್‌ ನೀಡುವಂತೆ ತಿಳಿಸಿದ್ದೇನೆ. ಇನ್ನೂ ಚಾಮರಾಜನಗರ ಗಡಿ ಜಿಲ್ಲೆಯಾಗಿರುವ ಕಾರಣ ಸರ್ಕಾರದ ಜೊತೆ ಮತಷ್ಟೂ ಚರ್ಚಿಸುತ್ತೇನೆ ಎಂದು ಹೇಳಿದರು.

ರೈತರು ಬೆಳೆ ಬೆಳೆಯಲು ಹೊಸ ಸಾಲ ನೀಡಲು ಡಿಸಿಸಿ ಬ್ಯಾಂಕ್ ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. 20 ಸಾವಿರದ 810 ಕೋಟಿ ಟಾರ್ಗೆಟ್ ನೀಡಲಾಗಿದೆ. ಒಂದು ವೇಳೆ ಹೊಸ ಸಾಲ ನೀಡಿಲು ವಿಳಂಬ ಮಾಡಿದರೆ‌ ಕ್ರಮ ಕೈಗೊಳ್ಳಲಾಗುವುದು ಎಂದರು.


Spread the love