ಕೊಲ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷ ಚೇತನ ಯುವತಿಯ ಮೃತದೇಹ ಪತ್ತೆ

Spread the love

ಕೊಲ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷ ಚೇತನ ಯುವತಿಯ ಮೃತದೇಹ ಪತ್ತೆ

ಮಂಗಳೂರು: ವಿಶೇಷ ಚೇತನ ಯುವತಿಯೋರ್ವಳು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿಯಲ್ಲಿ ನಡೆದಿದೆ. ಬಾಯಿಗೆ ಬಟ್ಟೆ ಕಟ್ಟಿ ಕುತ್ತಿಗೆಗೆ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಮೃತ ಯುವತಿಯನ್ನು ಛತ್ತೀಸ್ ಗಢ ಮೂಲದ ಸರಿತಾ ವರ್ಮ(23) ಎಂದು ಗುರುತಿಸಲಾಗಿದೆ. ಈಕೆ ಕೊಲ್ಯ ಸಾರಸ್ವತ ಕಾಲನಿಯ ಬಾಡಿಗೆ ಮನೆಯೊಂದರಲ್ಲಿ ಇಬ್ಬರು ಸಹೋದರರು ಹಾಗೂ ಅತ್ತಿಗೆ ಜೊತೆ ವಾಸವಿದ್ದರು. ಸೋಮವಾರ ಸಂಜೆ ಪ್ರಕರಣ ನಡೆದಿದೆಯೆನ್ನಲಾಗಿದೆ. ಈ ವೇಳೆ ಸಹೋದರರಿಬ್ಬರು ಕೆಲಸಕ್ಕೆ ತೆರಳಿದ್ದರೆ, ಅತ್ತಿಗೆ ಆಸ್ಪತ್ರೆಗೆ ತೆರಳಿದ್ದರೆನ್ನಲಾಗಿದೆ.

ಸರಿತಾ ವರ್ಮ ವಿಶೇಷ ಚೇತನರಾಗಿದ್ದು, ಮೂಗಿ ಮತ್ತು ಕಿವುಡಿಯಾಗಿದ್ದರು‌. ಮನೆಯ ಕೋಣೆಯಲ್ಲಿ ಕುತ್ತಿಗೆಗೆ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಸರಿತಾರ ಬಾಯಿಗೆ ಬಟ್ಟೆಯನ್ನು ಬಿಗಿಯಾಗಿ ಕಟ್ಟಲಾಗಿತ್ತೆನ್ನಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Spread the love