ಕೊಲ್ಲೂರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ

Spread the love

ಕೊಲ್ಲೂರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ

ಕುಂದಾಪುರ: ಜಗತ್ಪ್ರಸಿದ್ದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭಾನುವಾರ ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಪತ್ನಿ ಉಷಾ‌ ಡಿ.ಕೆ.ಶಿವಕುಮಾರ, ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ, ಕುಂದಾಪುರ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಪಕ್ಷದ ಪ್ರಮುಖರಾದ ಯು.ಬಿ.ಶೆಟ್ಟಿ, ಬಾಬು ಶೆಟ್ಟಿ ತಗ್ಗರ್ಸೆ, ಎಂ.ಎ.ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಿನೇಶ್ ಪುತ್ರನ್, ವಿಕಾಸ್ ಹೆಗ್ಡೆ, ರಾಜು ಎಸ್ ಪೂಜಾರಿ, ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ಶಂಕರ್ ಪೂಜಾರಿ ಯಡ್ತರೆ, ಹರೀಶ್ ತೋಳಾರ್ ಕೊಲ್ಲೂರು, ರಮೇಶ್ ಗಾಣಿಗ ಕೊಲ್ಲೂರು, ರಂಜಿತ್ ಕುಮಾರ್ ಶೆಟ್ಟಿ, ಅರವಿಂದ್ ಪೂಜಾರಿ ಪಡುಕೋಣೆ, ಅನೀಶ್ ಪೂಜಾರಿ ಬೈಂದೂರು ಇದ್ದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರು, ಡಿ.ಕೆ.ಶಿವಕುಮಾರ ಹಾಗೂ ಪತ್ನಿ ಉಷಾ‌ ಡಿ.ಕೆ.ಶಿವಕುಮಾರ ಅವರನ್ನು ಗೌರವಿಸಿದರು.

ಪ್ರಧಾನ ಅರ್ಚಕರಾದ ಎನ್.ನರಸಿಂಹ ಅಡಿಗ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂಧ್ಯಾ ರಮೇಶ್, ರತ್ನಾ‌ ರಮೇಶ್ ಕುಂದರ್ ಇದ್ದರು.


Spread the love