ಕೊಲ್ಲೂರಿನಲ್ಲಿ ಡಿಕೆ ಶಿವಕುಮಾರ್ ಅವರಿಂದ ಚಂಡಿಕಾ ಯಾಗ

Spread the love

ಕೊಲ್ಲೂರಿನಲ್ಲಿ ಡಿಕೆ ಶಿವಕುಮಾರ್ ಅವರಿಂದ ಚಂಡಿಕಾ ಯಾಗ

ಕುಂದಾಪುರ: ಜಗತ್ಪ್ರಸಿದ್ದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೋಮವಾರ ನವ ಚಂಡಿಕಾ ಯಾಗವನ್ನು ನೆರವೇರಿಸಿ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದುಕೊಂಡರು.

ಪ್ರಧಾನ ಅರ್ಚಕರಾದ ಎನ್.ನರಸಿಂಹ ಅಡಿಗ ಹಾಗೂ ಎನ್.ಸುಬ್ರಮಣ್ಯ ಅಡಿಗ ಅವರ ನೇತೃತ್ವದಲ್ಲಿ ನಡೆದ ಯಾಗದ ಪೂರ್ಣಾಹುತಿ ಹಾಗೂ ಧಾರ್ಮಿಕ ವಿಧಿಯಲ್ಲಿ ಪತ್ನಿ ಉಷಾ ಡಿ.ಕೆ.ಶಿವಕುಮಾರ ಅವರೊಂದಿಗೆ ಪಾಲ್ಗೊಂಡಿದ್ದ ಡಿಕೆಶಿ ಯಾಗದ ಎಲ್ಲಾ ವಿಧಿಗಳಲ್ಲಿಯೂ ಅತ್ಯಂತ ಶ್ರದ್ಧೆಯಿಂದ ಭಾಗವಹಿಸಿದರು.

ಉದ್ಯಮಿ ಯು.ಬಿ.ಶೆಟ್ಟಿ, ಪಕ್ಷದ ಪ್ರಮುಖರಾದ ರಾಜು ಎಸ್ ಪೂಜಾರಿ, ಶಂಕರ್ ಪೂಜಾರಿ ಯಡ್ತರೆ, ರಮೇಶ್ ಗಾಣಿಗ ಕೊಲ್ಲೂರು, ರಂಜಿತ್ ಕುಮಾರ್ ಶೆಟ್ಟಿ, ಶ್ರವಣ್ ಕುಮಾರ್ ಶೆಟ್ಟಿ, ಹರ್ಷ ಶೆಟ್ಟಿ, ಗ್ರೀಷ್ಮಾ ಭಿಡೆ ಇದ್ದರು.

ಪ್ರಧಾನ ಅರ್ಚಕರಾದ ಎನ್.ನರಸಿಂಹ ಅಡಿಗ ಹಾಗೂ ಎನ್.ಸುಬ್ರಮಣ್ಯ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ನಡೆಯಿತು.


Spread the love