ಕೊಲ್ಲೂರು ಮೂಕಾಂಬಿಕ ದೇವಸ್ಥಾನದಲ್ಲಿ ನವರಾತ್ರಿ ಆಚರಣೆಗೆ ಚಾಲನೆ

Spread the love

ಕೊಲ್ಲೂರು ಮೂಕಾಂಬಿಕ ದೇವಸ್ಥಾನದಲ್ಲಿ ನವರಾತ್ರಿ ಆಚರಣೆಗೆ ಚಾಲನೆ

ಕುಂದಾಪುರ: ಇಲ್ಲಿನ ಜಗತ್ಪ್ರಸಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಸರಳವಾಗಿ ನೆರವೇರಿಸಲಾಯಿತು.

ತಂತ್ರಿ ಕೆ. ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ನವರಾತ್ರಿ ಆರಂಭ ದಿನವಾದ ಗುರುವಾರ ಗಣಪತಿ ಪ್ರಾರ್ಥನೆಯ ಬಳಿಕ ನವರಾತ್ರಿ ಕಲಶ ಸ್ಥಾಪನೆಯೊಂದಿಗೆ ನವರಾತ್ರಿ ಆಚರಣೆಗೆ ಚಾಲನೆ ನೀಡಲಾಯಿತು. ಅಕ್ಟೋಬರ್ 7ರಿಂದ ಪ್ರಾರಂಭಗೊಂಡಿರುವ ನವರಾತ್ರಿ ಉತ್ಸವದ ಆಚರಣೆಗಳು ಅಕ್ಟೋಬರ್ 15 ರವರೆಗೂ ನಡೆಯಲಿದೆ.

ನವರಾತ್ರಿ ಪ್ರಾರಂಭದ ದಿನದಿಂದ 8ನೇ ದಿನದವರೆಗೂ ಮೂಕಾಂಬಿಕೆಗೆ ಯೋಗಾನಿದ್ರಾ ದುರ್ಗಾ, ದೇವಜಾತಾ ದುರ್ಗಾ, ಮಹಿಷಾಸುರ ಮರ್ದಿನಿ ದುರ್ಗಾ, ಶೈಲಜಾ ದುರ್ಗಾ, ಧೂಮ್ರಾ ದುರ್ಗಾ, ಚಂಡಮುಂಡ ದುರ್ಗಾ, ರಕ್ತಬೀಜಾ ದುರ್ಗಾ, ನಿಶೂಂಭಾ ದುರ್ಗಾ ಪೂಜಾಎಗಳು ನಡೆಯುತ್ತವೆ. ಮೊದಲ ದಿನದಿಂದ ಒಂಭತ್ತನೆ ದಿನದವರೆಗೂ ಪ್ರತೀ ಸಂಜೆ ಸುಹಾಸಿನಿ ಪೂಜೆ ನಡೆಯುತ್ತದೆ.

ರಾಜ್ಯ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್, ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ ಮಹೇಶ್, ವ್ಯವಸ್ಥಾಪನಾ ಸಮಿತಿಯ ಸದಸ್ಯರು ಇತರರು ಇದ್ದರು.


Spread the love