ಕೊಳ್ಕೆರೆ ವಿಜಯಲಕ್ಷ್ಮಿ ಎಸ್ ಹೆಗ್ಡೆ ನಿಧನ  

Spread the love

ಕೊಳ್ಕೆರೆ ವಿಜಯಲಕ್ಷ್ಮಿ ಎಸ್ ಹೆಗ್ಡೆ ನಿಧನ  

ಕುಂದಾಪುರ : ಬಸ್ರೂರಿನ ಪ್ರಸಿದ್ಧ ಕೊಳ್ಕೆರೆ ಮನೆತನದ ಕೊಳ್ಕೆರೆ ವಿಜಯಲಕ್ಷ್ಮಿ ಎಸ್ ಹೆಗ್ಡೆ (76) ಅವರು ಅಲ್ಪ ಸಮಯದ ಅಸೌಖ್ಯದಿಂದಾಗಿ ಮಂಗಳವಾರ ಸಂಜೆ ನಿಧನರಾಗಿದ್ದಾರೆ.

ಮೃತರಿಗೆ ಪುತ್ರ ಕುಂದಾಪುರದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ವಿಕಾಸ್ ಹೆಗ್ಡೆ ಹಾಗೂ ಪುತ್ರಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೇವಾನಂದ್ ಶೆಟ್ಟಿ ಅವರ ಪತ್ನಿ ವರ್ಷಾ ಶೆಟ್ಟಿ ಇದ್ದಾರೆ.

ಬುಧವಾರ ಬೆಳಗ್ಗೆ 9 ಗಂಟೆಗೆ ಪಾರ್ಥಿವ ಶರೀರವನ್ನು ಕೊಳ್ಕೆರೆ ಮನೆಗೆ ತಂದು ನಂತರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.


Spread the love