ಕೋಟಿ ಒಡೆಯನಾಗಿ ವಿಜೃಂಭಿಸುತ್ತಿರುವ ಮಾದಪ್ಪ

Spread the love

ಕೋಟಿ ಒಡೆಯನಾಗಿ ವಿಜೃಂಭಿಸುತ್ತಿರುವ ಮಾದಪ್ಪ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಶ್ರೀ ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಾದಪ್ಪನ ಸನ್ನಿಧಿಯಲ್ಲಿ ಸಂಗ್ರಹವಾದ ಕಾಣಿಕೆ ಹುಂಡಿಗಳ ಎಣಿಕೆ ಕಾರ್ಯ ಸುಸೂತ್ರವಾಗಿ ನಡೆದಿದ್ದು, ಮತ್ತೆ ಮಾದಪ್ಪ ಕೋಟಿ ಒಡೆಯನಾಗಿಯೇ ವಿಜೃಂಭಿಸಿದ್ದಾನೆ, ಸುಮಾರು 40 ದಿನಗಳ ಅವಧಿಯಲ್ಲಿ 2ಕೋಟಿಯಷ್ಟು ಕಾಣಿಕೆ ಸಂಗ್ರಹವಾಗಿದೆ.

ಶ್ರೀ ಮಲೆ ಮಹದೇಶ್ವರ ಬೆಟ್ಟದ ವಾಣಿಜ್ಯ ಸಂಕಿರಣದಲ್ಲಿ ಸಾಲೂರು ಬೃಹನ್ಮಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಪೊಲೀಸ್ ಬಂದೋಬಸ್ತ್ ಮತ್ತು ಸಿಸಿ ಕ್ಯಾಮರಾ ಅಳವಡಿಸಿರುವ ವಾಣಿಜ್ಯ ಸಂಕೀರ್ಣದಲ್ಲಿ ಎಣಿಕೆ ಕಾರ್ಯ ಆರಂಭಿಸಲಾಯಿತು.

ಜು.14 ರಿಂದ ಆ.22ರವರೆಗಿನ ಅವಧಿಯ ಸುಮಾರು 40 ದಿನಗಳಲ್ಲಿ ಸಂಗ್ರಹವಾದ ಕಾಣಿಕೆ ಹುಂಡಿಯನ್ನು ಈ ವೇಳೆ ಎಣಿಕೆ ಮಾಡಲಾಯಿತು. ಈ ವೇಳೆ ಹುಂಡಿಯಲ್ಲಿ 2,00,16,,340 ಕೋಟಿ ರೂಪಾಯಿ ಹಾಗೂ 2.342ಕೆಜಿ.ಬೆಳ್ಳಿ, 50ಗ್ರಾಂ ಚಿನ್ನ ಸಂಗ್ರಹವಾಗಿದೆ

ಎಣಿಕೆ ಕಾರ್ಯದ ವೇಳೆ ಶ್ರೀ ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ಕ್ಯಾತಾಯಿನಿ ದೇವಿ, ಉಪಕಾರ್ಯದರ್ಶಿ ಬಸವರಾಜು, ಲೆಕ್ಕಾಧೀಕ್ಷಕರಾದ ಪ್ರವೀಣ್ ಪಟೀಲ್, ಜಿಲ್ಲಾಧಿಕಾರಿ ಕಚೇರಿಯ ಪ್ರಥಮದರ್ಜೆ ಸಿಬ್ಬಂದಿ ಸಚಿನ್, ಮಹದೇವಸ್ವಾಮಿ, ನಾಗರಾಜ್, ಮಾದೇಶ್, ಮಲ್ಲಿಕಾರ್ಜುನಪ್ಪ, ಎಸ್ ಬಿ ಐ ಬ್ಯಾಂಕ್ ನೌಕರರು, ಸಿಬ್ಬಂದಿ ವರ್ಗದವರು ಇನ್ನಿತರರು ಇದ್ದರು


Spread the love