ಕೋಟಿ ಗೀತಾ ಲೇಖನಯಜ್ಞದ ಕೋಟಿ ಲೇಖನ ಪುಸ್ತಕಗಳ ಬಿಡುಗಡೆ

Spread the love

ಕೋಟಿ ಗೀತಾ ಲೇಖನಯಜ್ಞದ ಕೋಟಿ ಲೇಖನ ಪುಸ್ತಕಗಳ ಬಿಡುಗಡೆ

ಉಡುಪಿ: ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಚತುರ್ಥ ಪರ್ಯಾಯದ ಅಂಗವಾಗಿ ಸಂಕಲ್ಪಿಸಿರುವ ಕೋಟಿ ಗೀತಾ ಲೇಖನಯಜ್ಞದ ಕೋಟಿ ಲೇಖನ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಜರುಗಿತು.

ಈ ವೇಳೆ ಮಾತನಾಡಿದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನಾಲ್ಕನೇ ಪರ್ಯಾಯ ವಿಶ್ವ ಪರ್ಯಾಯವಾಗಬೇಕೆಂಬ ಕಾರಣಕ್ಕೆ ವಿಶ್ವಪ್ರಸನ್ನ ಮತ್ತು ವಿಶ್ವಪ್ರಿಯರ ಮೂಲಕ ಉದ್ಘಾಟನೆ ಮಾಡಿಸಲಾಗುತ್ತಿದೆ, ಸಿಂಗಾಪುರದ ಕಾರ್ಯಕ್ರಮವೊಂದರಲ್ಲಿ ಚೈನೀಸ್ ರು ಭಗವದ್ಗೀತೆ ಭಾರತದ ಗ್ರಂಥ ಅಲ್ಲ, ವಿಶ್ವದ ಗ್ರಂಥ ಎಂದು ಹೊಗಳಿದ್ದಾರೆ ಎಂದು ತಿಳಿಸಿದರು

ಲೇಖನ ಯಜ್ಞ ಕನ್ನಡ ಆವೃತ್ತಿಯನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು ಬಿಡುಗಡೆ ಗೊಳಿಸಿ, ಭಗವದ್ಗೀತೆಯಲ್ಲಿ ಎಲ್ಲದಕ್ಕೂ ಪರಿಹಾರ ಮತ್ತು ಮಾರ್ಗದರ್ಶನ ಇದೆ. ಶ್ರೀಗಳ ಉತ್ತಮ ಯೋಜನೆಗೆ ಭಗವಂತ ಅನುಗ್ರಹಿಸಲಿ ಎಂದು ಶುಭ ಕೋರಿದರು

ಲೇಖನಯಜ್ಞ ಪುಸ್ತಕಗಳ ಇಂಗ್ಲಿಷ್ ಆವೃತ್ತಿಯನ್ನು ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯತೀರ್ಥರು ಉದ್ಘಾಟಿಸಿ ಗಡಿಯಲ್ಲಿ ಸೈನಿಕರು ಎಚ್ಚರವಿರುವುದಕ್ಕೆ ನಾವಿಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಕೋಟಿ ಭಗವದ್ಗೀತೆಯ ಪುಸ್ತಕ ಬರೆಯುವ ಮೂಲಕ ದೇಶದ ಸೈನಿಕರ ಶಕ್ತಿಗಾಗಿ ಪ್ರಾರ್ಥಿಸಿ ಎಂದು ಕರೆ ನೀಡಿದರು

ಸಮಾರಂಭದಲ್ಲಿ ಮಹಿತೋಷ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು


Spread the love