
Spread the love
ಕೋಟೆ ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ; ಅಧ್ಯಕ್ಷರಾಗಿ ಪ್ರಮೀಳಾ ಜತ್ತನ್ನ, ಉಪಾಧ್ಯಕ್ಷರಾಗಿ ಯೋಗಿಶ್ ಆಯ್ಕೆ
ಉಡುಪಿ: ಕಾಪು ತಾಲೂಕಿನ ಕೋಟೆ ಗ್ರಾಮಪಂಚಾಯತ್ ನ ನೂತನ ಅಧ್ಯಕ್ಷರಾಗಿ ಪ್ರಮೀಳಾ ಜತ್ತನ್ನ ಮತ್ತು ಉಪಾಧ್ಯಕ್ಷರಾಗಿ ಯೋಗಿಶ್ ಆಯ್ಕೆಯಾಗಿದ್ದಾರೆ.
15 ಮಂದಿ ಸದಸ್ಯ ಬಲದ ಕೋಟೆ ಗ್ರಾಮಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ 8 ಮಂದಿ ಸದಸ್ಯರಿದ್ದು, 7 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ.
ಶುಕ್ರವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಪ್ರೇಮಾ ಕುಂದರ್ ಮತ್ತು ಕಾಂಗ್ರೆಸ್ ಬೆಂಬಲಿತರ ಪರವಾಗಿ ಪ್ರಮೀಳಾ ಜತ್ತನ್ನ ನಾಮಪತ್ರ ಸಲ್ಲಿಸಿದ್ದು, ಪ್ರಮೀಳಾ ಜತ್ತನ್ನ 8 ಮತಗಳನ್ನು ಪಡೆದಿದ್ದು ಬಿಜೆಪಿ ಬೆಂಬಲಿತ ಪ್ರೇಮಾ ಕುಂದರ್ 7 ಮತಗಳನ್ನು ಪಡೆದರು. ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಯೋಗಿಶ್ ಆಯ್ಕೆಯಾದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಶಾಂತ್ ಜತ್ತನ್ನ ಹಾಗೂ ಅಶೋಕ್ ನಾಯರಿ ಇವರ ಚಾಣಾಕ್ಷ್ಯ ನಡೆಯಿಂದಾಗಿ ಕೋಟೆ ಗ್ರಾಮ ಪಂಚಾಯತನ್ನು ಕಾಂಗ್ರೆಸ್ ತೆಕ್ಕೆಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Spread the love