
ಕೋಟೇಶ್ವರ : ಹರ್ ಘರ್ ತಿರಂಗಕ್ಕೆ ಒಂದು ಸಾವಿರ ರಾಷ್ಟ್ರಧ್ವಜ ವಿತರಣೆ
ಕುಂದಾಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನ ಮಂತ್ರಿಗಳ ಮಹತ್ವದ ಯೋಜನೆಯಾದ ಹರ್ ಘರ್ ತಿರಂಗ ಕಾಯ೯ಕ್ರಮದಡಿಯಲ್ಲಿ ಪ್ರತಿಯೊಬ್ಬರ ಮನೆಗಳಲ್ಲಿಯೂ ಆ. 13, 14 ಮತ್ತು 15 ರಂದು ರಾಷ್ಟ್ರಧ್ವಜವನ್ನು ಹಾರಿಸಲಾಗುವುದು ಎಂದು ಉಡುಪಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದರು.
ಇಲ್ಲಿಗೆ ಸಮೀಪದ ಕೋಟೇಶ್ವರದ ಎಲ್.ಜಿ. ಇಂಡಸ್ಟ್ರೀಸ್ ಸಂಸ್ಥೆಯ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ವಿತರಿಸುವ ಒಂದು ಸಾವಿರಕ್ಕೂ ಅಧಿಕ ರಾಷ್ಟ್ರಧ್ವಜ ವಿತರಣೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿಗಳ ಆಶಯದಂತೆ ಪ್ರತಿ ಮನೆಗಳಲ್ಲಿಯೂ ರಾಷ್ಟ್ರಧ್ವಜ ಹಾರಿಸುವ ಕಾರ್ಯಕ್ರಮದ ಮೊದಲ ಹೆಜ್ಜೆಯಾಗಿ ಎಲ್.ಜಿ. ಇಂಡಸ್ಟ್ರೀಸ್ ಸಂಸ್ಥೆಯಲ್ಲಿ ದುಡಿಯುವ ಎಲ್ಲಾ ಕಾಮಿ೯ಕರ ಮನೆಗಳಲ್ಲೂ ರಾಷ್ಟ್ರಧ್ವಜವನ್ನು ಅರಳಿಸುವ ಉದ್ದೇಶದಿಂದ ಈ ಕಾಯ೯ಕ್ರಮ ನಡೆಯುತ್ತಿರುವುದು ಅತ್ಯಂತ ಸುತ್ಯರ್ಹ ಎಂದರು.
ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕ ಯೋಗಿ ನಾಯಕ್ ಅವರು ತ್ರಿವರ್ಣ ಧ್ವಜ ಹಾಗೂ ಅದರ ಮಹತ್ವದ ಕುರಿತಾಗಿ ತಿಳಿಸಿದರು. ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ಗೊಲ್ಲ ಅವರು ಹರ್ ಘರ್ ತಿರಂಗ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೋಟೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಪೂರ್ಣಿಮಾ, ಎಲ್.ಜಿ. ಇಂಡಸ್ಟ್ರೀಸ್ ಪಾಲುದಾರರಾದ ದೀಕ್ಷಾ ಕಾಮತ್ ಮತ್ತು ಹರ್ಷಾ ಕಾಮತ್ ಇದ್ದರು.
ಅಶೋಕ್ ಭಂಡಾರ್ಕಾರ್ ನಿರೂಪಿಸಿದರು, ಹರ್ಷಾ ಕಾಮತ್ ವಂದಿಸಿದರು.