ಕೋಟ:  ಇಬ್ಬರು ಅಂತರ್ ರಾಜ್ಯ ದ್ವಿಚಕ್ರ ವಾಹನ ಕಳ್ಳರ ಬಂಧನ

Spread the love

ಕೋಟ:  ಇಬ್ಬರು ಅಂತರ್ ರಾಜ್ಯ ದ್ವಿಚಕ್ರ ವಾಹನ ಕಳ್ಳರ ಬಂಧನ

ಕುಂದಾಪುರ: ಇಬ್ಬರು ಅಂತರ್ ರಾಜ್ಯ ದ್ವಿಚಕ್ರ ವಾಹನ ಕಳ್ಳರನ್ನು ಕೋಟ ಪೊಲೀಸ್‌ ಠಾಣೆಯ ವಿಶೇಷ ತಂಡವು ಶುಕ್ರವಾರ ಬಂಧಿಸಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕು, ಈಶ್ವರ ದೇವಸ್ಥಾನದ ಬಳಿಯ ಅತ್ತಿಗುಡ್ಡ ನಿವಾಸಿಗಳಾದ ಸೋಮ ಶೇಖರ ಪ್ರಾಯ (21) ಹಾಗು ಬಾಗಲಕೋಟೆ ಜಿಲ್ಲೆಯ ಹುನಗುಂಡ ತಾಲೂಕಿನ ಹೊಸಮನೆ ಚಿಕ್ಕರನಕೇರಿಯ ಶಂಕರ ಗೌಡ (23) ಬಂಧಿತ ಆರೋಪಿಗಳು

ಉಡುಪಿ ಜಿಲ್ಲೆಯ ವಿವಿಧಡೆ ದ್ವಿಚಕ್ರ ವಾಹನ ಕಳ್ಳತನ ತಡೆಗಟ್ಟುವುದು ಹಾಗೂ ಪತ್ತೆ ಮಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರವರ ನಿರ್ದೇಶನದಂತೆ ವಾಹನ ತಪಾಸಣೆ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಬ್ರಹ್ಮಾವರ ಪೊಲೀಸ್‌ ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭರವರ ನೇತೃತ್ವದ ವಿಶೇಷ ತಂಡ ಕೋಟ ಸರಹದ್ದಿನ ವಿವಿಧ ಭಾಗದಲ್ಲಿ ವಾಹನ ತಪಾಸಣೆ ಮತ್ತು ದಾಖಲೆ ಪರಿಶೀಲಿಸುತ್ತಿರುವ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಶುಕ್ರವಾರ ವಡ್ಡರ್ಸೆ ಗ್ರಾಮದ ರೈಲ್ವೇ ಬ್ರಿಡ್ಜ್‌ ಬಳಿ ನಂಬರ್ ಪ್ಲೇಟ್‌ ಇಲ್ಲದ ಸ್ಪ್ಲೆಂಡರ್‌ ವಾಹನವನ್ನು ಸಂಶಯಾಸ್ಪದವಾಗಿ ನಿಲ್ಲಿಸಿದ್ದು, ದಾಖಲೆಯನ್ನು ವಿಚಾರಿಸಿದಾಗ ಯಾವುದೇ ದಾಖಲೆ ನೀಡದ್ದರಿಂದ ಕಳ್ಳತನ ಮಾಡಿದ ಬೈಕ್‌ ಎಂಬುದಾಗಿ ತನಿಖೆಯಿಂದ ತಿಳಿದು ಬಂದಿದ್ದು, ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಈ ದ್ವಿಚಕ್ರ ವಾಹನ ಕಳ್ಳರು ಕಳೆದ 3 ವರ್ಷಗಳಿಂದ ಉಡುಪಿ, ಚಿಕ್ಕಮಗಳೂರು, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದು, ಕೋಟ ಪೊಲೀಸರ ವಿಶೇಷ ತಂಡವು ಒಟ್ಟು 12 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಭೇದಿಸಿರುತ್ತಾರೆ. ಇದರಲ್ಲಿ ಉಡುಪಿ ನಗರ ಠಾಣೆಯ – 7, ಬ್ರಹ್ಮಾವರ ಠಾಣೆಯ – 1, ಶಂಕರಾನಾರಾಯಣ ಠಾಣೆಯ – 1, ಶೃಂಗೇರಿ ಠಾಣೆಯ- 1, ವಿಜಯನಗರದ ಜಿಲ್ಲೆಯ ಇಟಗಿ ಠಾಣೆಯ -1 ಮತ್ತು ದಾವಣಗೆರೆ ಠಾಣೆಯ -1 ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದು ತನಿಖೆಯಿಂದ ತಿಳಿದುಬಂದಿರುತ್ತದೆ. ಇವುಗಳಲ್ಲಿ 3 ಪಲ್ಸರ್‌ ಬೈಕ್‌, 5 ಸ್ಪ್ಲೆಂಡರ್‌ ಬೈಕ್‌ ಮತ್ತು 1 ಹೀರೋ ಹೆಚ್‌.ಎಫ್‌. ಡಿಲಕ್ಸ್‌ ಬೈಕ್‌ ಒಳಗೊಂಡಂತೆ ಒಟ್ಟು 9 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು ಸ್ವಾಧೀನಪಡಿಸಿದ ಸೊತ್ತುಗಳ ಮೌಲ್ಯ ಅಂದಾಜು -450000 /- ರೂಪಾಯಿ ಆಗಿರುತ್ತದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ಎನ್,ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್ .ಟಿ ಸಿದ್ದಲಿಂಗಪ್ಪ ರವರ ಮಾರ್ಗದರ್ಶನದಂತೆ, ಸುಧಾಕರ ಎಸ್ ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪ ವಿಭಾಗ, ಉಡುಪಿ ರವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಅನಂತ ಪದ್ಮನಾಭ, ಸಿ.ಪಿ.ಐ ಬ್ರಹ್ಮಾವರ, ಕೋಟ ಠಾಣೆಯ ಪಿ.ಎಸ್.ಐ ಮಧು ಬಿ.ಇ, ಕೋಟ ಠಾಣೆಯ ತನಿಖಾ ವಿಭಾಗದ ಪಿ.ಎಸ್‌.ಐ ಪುಷ್ಪಾ, ಪ್ರೊ. ಪಿ.ಎಸ್‌.ಐ. ಮಹಾಂತೇಶ್‌, ಪ್ರೊ. ಪಿ.ಎಸ್‌.ಐ ಪುನೀತ್‌, ಹಿರಿಯಡ್ಕ ಠಾಣೆಯ ಪ್ರೊಬೆಷನರಿ ಪಿ.ಎಸ್.ಐ ಮಂಜುನಾಥ ಮರಬದ, ಕೋಟ ಠಾಣಾ ಎ.ಎಸ್‌.ಐ. ರವಿ ಕುಮಾರ್‌, ಸಿಬ್ಬಂದಿಯವರಾದ ರಾಘವೇಂದ್ರ, ಪ್ರಸನ್ನ, ರಾಜೇಶ್‌, ಕೃಷ್ಣ ಹಾಗೂ ಬ್ರಹ್ಮಾವರ ವೃತ್ತ ಕಛೇರಿಯ ಪ್ರದೀಪ್ ನಾಯಕ, ಹಾಗೂ ಉಡುಪಿ ನಗರ ಠಾಣಾ ಸಿಬ್ಬಂದಿಗಳಾದ ಸತೀಶ , ಸಂತೋಷ ರಾಥೋಡ್, ಕಿರಣ, ಹನುಮಂತ, ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ ರವರುಗಳು ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ.ಎನ್, ಐ.ಪಿ.ಎಸ್ ರವರು ತಂಡವನ್ನು ಅಭಿನಂದಿಸಿರುತ್ತಾರೆ


Spread the love