ಕೋಟ: ಲಾರಿ- ಬೈಕ್‌ ನಡುವೆ ಅಫಘಾತ – ಒರ್ವ ಸಾವು, ಇಬ್ಬರು ಗಂಭೀರ

Spread the love

ಕೋಟ: ಲಾರಿ- ಬೈಕ್‌ ನಡುವೆ ಅಫಘಾತ – ಒರ್ವ ಸಾವು, ಇಬ್ಬರು ಗಂಭೀರ

ಕೋಟ : ಬ್ರಹ್ಮಾವರ ತಾಲೂಕು ಕೋಟ ಮಣೂರು ಬೊಬ್ಬರ್ಯ ಕಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ಅಪರಾಹ್ನ 3.30ರ ಸುಮಾರಿಗೆ ಈಚರ್ ಲಾರಿ ಹಾಗೂ ದ್ವಿಚಕ್ರ ವಾಹನ ಮದ್ಯೆ ಅಪಘಾತವಾಗಿ ಓರ್ವ ಮೃತಪಟ್ಟಿದ್ದು ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಪಾದಾಚಾರಿ ಪ್ರಸನ್ನ ದೇವಾಡಿಗ ಎಂದು ಗುರುತಿಸಲಾಗಿದೆ

ಮಂಗಳೂರಿಂದ ಕುಂದಾಪುರ ಹೋಗುವ ಲಾರಿಯು ಕೋಟ ಮಣೂರು ಬೊಬ್ಬರ್ಯ ಕಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಮಧ್ಯೆ ಕೆಟ್ಟು ನಿಂತಿದ್ದು. ಅದೇ ದಾರಿಯಾಗಿ ಕೋಟದಿಂದ ಕುಂಭಾಶಿ ಕಡೆಗೆ ಹೋಗುತ್ತಿದ್ದ ಬೈಕ್ ಸವಾರರು ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಕೆಟ್ಟು ನಿಂತ ಲಾರಿಯನ್ನು ಗಮನಿಸದೆ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿರುತ್ತಾರೆ. ಡಿಕ್ಕಿಯ ರಭಸಕ್ಕೆ ಬೈಕ್ ಪಾದಚಾರಿ ಓರ್ವನಿಗೆ ಡಿಕ್ಕಿ ಹೊಡೆದಿದ್ದು ಅವರು ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಬೈಕ್ ಸಾವರರಿಬ್ಬರು ಗಂಭೀರ ಗಾಯಗೊಂಡಿದ್ದು ಅವರನ್ನು ಕೋಟ ಜೀವನ್ ಮಿತ್ರ ಆಂಬುಲೆನ್ಸ್ ನಲ್ಲಿ ಭರತ್ ಗಾಣಿಗ ಅವರು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಸೇರಿಸಿರುತ್ತಾರೆ.

ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love