ಕೋಟ: ವೈಕುಂಠ ಸಮಾರಾಧನೆ ಕಾರ್ಯಕ್ರಮ ಮುಗಿಸಿ ವಾಪಾಸಾಗುತ್ತಿದ್ದ ಮಹಿಳೆಯ ಸರಗಳ್ಳತನ

Spread the love

ಕೋಟ: ವೈಕುಂಠ ಸಮಾರಾಧನೆ ಕಾರ್ಯಕ್ರಮ ಮುಗಿಸಿ ವಾಪಾಸಾಗುತ್ತಿದ್ದ ಮಹಿಳೆಯ ಸರಗಳ್ಳತನ

ಉಡುಪಿ: ವೈಕುಂಠ ಸಮಾರಾಧನೆ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಾಸಾಗುತ್ತಿದ್ದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಕದ್ದು ಬೈಕ್‌ ಸವಾರರಿಬ್ಬರು ಪರಾರಿಯಾದ ಘಟನೆ ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯ ಚಿತ್ರಪಾಡಿ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಚಿತ್ರಪಾಡಿ ನಿವಾಸಿ ಸುಮೀತ್ರಾ ಉಪಾಧ್ಯ (64) ಅವರು ಮಂಗಳವಾರ ಮಧ್ಯಾಹ್ನ ಸಂಬಂಧಿಕರ ಮನೆಯಲ್ಲಿನ ವೈಕುಂಠ ಸಮಾರಾಧನೆ ಕಾರ್ಯಕ್ರಮಕ್ಕೆಂದು ಹೋದವರು, ಅಲ್ಲಿ ಊಟ ಮುಗಿಸಿಕೊಂಡು ಮಧ್ಯಾಹ್ನ ಸುಮಾರು 2 ಗಂಟೆಗೆ ವಾಪಾಸು ತಮ್ಮ ಮನೆಗೆಂದು ನಡೆದುಕೊಂಡು ಬರುತ್ತಿದ್ದು, ಆಗ ಅವರ ಹಿಂದಿನಿಂದ ರಸ್ತೆಯಲ್ಲಿ ಒಂದು ಬೈಕಿನಲ್ಲಿ ಇಬ್ಬರು ಅಪರಿಚಿತ ಸವಾರರು ಬಂದಿಳಿದಿದ್ದು, ಬಳಿಕ ಸುಮಿತ್ರಾ ಅವರು ಅಲ್ಲಿಂದ ಮುಂದೆ ನಡೆದುಕೊಂಡು ಹೋಗುತ್ತಿರುವಾಗ ಆ ಬೈಕಿನಲ್ಲಿದ್ದವರ ಪೈಕಿ ಹಿಂಬದಿ ಕುಳಿತವನು ಸುಮಿತ್ರಾರನ್ನು ಅವರ ಮನೆಯವರೆಗೂ ಹಿಂಬಾಲಿಸುತ್ತಾ ಮನೆಯ ಬಳಿ ಬಂದು ಅವರಲ್ಲಿ ಹಿಂದಿ ಭಾಷೆಯಲ್ಲಿ ಅಕ್ಕಪಕ್ಕದ ಜಾಗದ ಬಗ್ಗೆ ವಿಚಾರಿಸಿದ್ದು, ಆ ಸಮಯ ಆ ವ್ಯಕ್ತಿಯು ಏಕಾಏಕಿ ಸುಮಿತ್ರಾ ಅವರ ಕುತ್ತಿಗೆಗೆ ಕೈಹಾಕಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕದ್ದು ಆತನೊಂದಿಗೆ ಬಂದಿದ್ದ ಇನ್ನೋರ್ವನೊಂದಿಗೆ ಬೈಕಿನಲ್ಲಿ ಪರಾರಿಯಾಗಿದ್ದಾನೆ. ಕಳವಾದ ಕರಿಮಣಿ ಸರದ ಮೌಲ್ಯ ಸುಮಾರು 1,25,000/- ಆಗಿರುತ್ತದೆ.

ಈ ಕುರಿತು ಕೋಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ


Spread the love