Home Mangalorean News Kannada News ಕೋಮು ವಿಷ ಬೀಜ ಬಿತ್ತುವ ಭಾಷಣಕಾರರ ಮೇಲೆ ಪೋಲಿಸ್ ಇಲಾಖೆಯಿಂದ ಕಠಿಣ ಕ್ರಮವಾಗಲಿ : ಮೊಹಮ್ಮದ್...

ಕೋಮು ವಿಷ ಬೀಜ ಬಿತ್ತುವ ಭಾಷಣಕಾರರ ಮೇಲೆ ಪೋಲಿಸ್ ಇಲಾಖೆಯಿಂದ ಕಠಿಣ ಕ್ರಮವಾಗಲಿ : ಮೊಹಮ್ಮದ್ ನಿಯಾಜ಼್

Spread the love

ಕೋಮು ವಿಷ ಬೀಜ ಬಿತ್ತುವ ಭಾಷಣಕಾರರ ಮೇಲೆ ಪೋಲಿಸ್ ಇಲಾಖೆಯಿಂದ ಕಠಿಣ ಕ್ರಮವಾಗಲಿ : ಮೊಹಮ್ಮದ್ ನಿಯಾಜ಼್

ಕಾಪು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನ ಪ್ರಜ್ಞಾವಂತರು ರಾಜ್ಯದಲ್ಲಿಯೇ ಶೈಕ್ಷಣಿಕವಾಗಿ ಪ್ರಥಮ ಸ್ಥಾನದಲ್ಲಿರುವವರು. ಆದರೆ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಸಂಘರ್ಷ ಹತ್ಯೆ ನಡೆಯುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ ಎಂದು ಕಾಪು ವಿಧಾನಸಭಾಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ನಿಯಾಜ಼್ ಹೇಳಿದ್ದಾರೆ.

ಕರಾವಳಿ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ತತ್ತರಿಸಿ ಹೋಗಿದ್ದು ಸಾರ್ವಜನಿಕರು ಭಯದಿಂದ ಓಡಾಡುವ ಪರಿಸ್ಥಿತಿಯತ್ತ ಜಿಲ್ಲೆ ಸಾಗಿದೆ ವಿದ್ಯಾವಂತರ ಬುದ್ದಿವಂತರ ಜಿಲ್ಲೆಯಲ್ಲಿ ಈ ಪರಿಸ್ಥಿತಿ ಊಹಿಸಲಾಧ್ಯವಾಗಿದೆ. ಯಾವುದೇ ಧರ್ಮದಲ್ಲಿಯೂ ಆಗಬಹುದು ಅದು ಕೊಲೆ ಹತ್ಯೆಯಿಂದ ಅಂತ್ಯವಾಗಬಾರದು ಈ ಬಗ್ಗೆ ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಕೋಮುಭಾವನೆಗಳ ಕೆರಳಿಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವ ಯಾವುದೇ ಧರ್ಮದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದಾರೆ


Spread the love

Exit mobile version