ಕೋರೊನಾ ನಿಯಂತ್ರಣ ನಿಟ್ಟಿನಲ್ಲಿ ಸರ್ಕಾರದ ನಿಯಮ ಪಾಲಿಸಿ – ದಕ ಜಿಲ್ಲಾ ಪೊಲೀಸ್

Spread the love

ಕೋರೊನಾ ನಿಯಂತ್ರಣ ನಿಟ್ಟಿನಲ್ಲಿ ಸರ್ಕಾರದ ನಿಯಮ ಪಾಲಿಸಿ – ದಕ ಜಿಲ್ಲಾ ಪೊಲೀಸ್

ಮಂಗಳೂರು: ಪ್ರಸ್ತುತ ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸರ್ಕಾರವು ವಿಧಿಸಿರುವ ನಿಬಂಧನೆಗಳನ್ನು ಜಿಲ್ಲೆಯಲ್ಲಿ ಈಗಾಗಲೇ ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ದಿನಾಂಕ 22.04.2021 ರಿಂದ ಈವರೆಗೆ ಒಟ್ಟು 7636 ಮಾಸ್ಕ್ ಕೇಸ್, ನಿಯಮಾವಳಿಗಳನ್ನು ಉಲ್ಲಂಘಿಸಿದವರ ವಿರುದ್ಧ ಒಟ್ಟು 76 ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ ಅನಗತ್ಯವಾಗಿ ತಿರುಗಾಡುತ್ತಿದ್ದ 840 ವಾಹನಗಳನ್ನು ಜಪ್ತಿಮಾಡಲಾಗಿದೆ.

ಸರ್ಕಾರವು ಕೊರೋನಾ ರೋಗ ತಡೆಗಟ್ಟುವ ನಿಮಿತ್ತ ಅದೇಶಿಸಿರುವ ನಿಯಮಾವಳಿಗಳನ್ನು ದಿನಾಂಕ 07.06.2021 ರವರೆಗೆ ವಿಸ್ತರಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಸದರಿ ನಿಯಮಾವಳಿಗಳ ಪಾಲನೆಯನ್ನು ನಿಗದಿತ ದಿನಾಂಕದವರೆಗೆ ಇನ್ನಷ್ಟು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಲಿದ್ದು, ಸಾರ್ವಜನಿಕರು ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಅತ್ಯಂತ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಅನಗತ್ಯವಾಗಿ ತಿರುಗಾಡದೇ ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿ ದಕ ಜಿಲ್ಲಾ ಪೊಲೀಸ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ.


Spread the love

1 Comment

  1. ನಿಯಮ ಪಾಲನೆ ಮಾಡಿ ಮನೆಯಲ್ಲಿ ಕುಳಿತು ಕೊಳ್ಳುತ್ತೆವೆ
    ನಮ್ಮ ಧೈನಂದಿನ ಖರ್ಚು ನೋಡುವವರು ಯಾರು ಸಾರ್
    ದಯವಿಟ್ಟು ಉತ್ತರಿಸಿ

Comments are closed.