ಕೋರ್ಟ್ ವಾರ್ಡಿನಲ್ಲಿ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ವಿತರಣೆ 

Spread the love

ಕೋರ್ಟ್ ವಾರ್ಡಿನಲ್ಲಿ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ವಿತರಣೆ 

ಮಂಗಳೂರು: ನಗರದ ಕೋರ್ಟ್ ವಾರ್ಡ್ ವ್ಯಾಪ್ತಿಯಲ್ಲಿರುವ ಅತ್ತಾವರ ಕಟ್ಟಪುಣಿ ಪ್ರದೇಶದಲ್ಲಿ ವಾಸಿಸುತ್ತಿರುವ ಬಡ ಜನರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಮಾಜಿ ಶಾಸಕರಾದ ಜೆ. ಆರ್. ಲೋಬೊರವರು, ಕಾಂಗ್ರೆಸ್ ಪಕ್ಷಕ್ಕೆ ಬಡ ಜನರ ಕಷ್ಟ ಗೊತ್ತಿದೆ. ಕೋವಿಡ್ ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಜನರಿಗೆ ಜೀವನ ಸಾಗಿಸಲು ಕಷ್ಟವಾಗುತ್ತಿದೆ. ಇದನ್ನರಿತು ಕಾಂಗ್ರೆಸ್ ಪಕ್ಷವು ಬಡವರಿಗೆ ಜೀವನ ನಡೆಸಲು ದಿನ ನಿತ್ಯದ ಸಾಮಗ್ರಿಗಳ ರೇಷನ್ ಕಿಟ್ ಗಳನ್ನು ನೀಡಿದೆ ಎಂದರು.

ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ಎ. ಸಿ. ವಿನಯರಾಜ್, ಪಕ್ಷದ ಪ್ರಮುಖರಾದ ಹೊನ್ನಯ್ಯ, ಟಿ. ಕೆ. ಸುಧೀರ್, ನೀರಜ್ ಪಾಲ್, ದುರ್ಗಾಪ್ರಸಾದ್,ಉದಯ ಕುಂದರ್, ಪ್ರವೀಣ್, ಗೀತಾ ಪ್ರವೀಣ್,ಭಾಸ್ಕರ್ ರಾವ್,ರಮಾನಂದ್ ಪೂಜಾರಿ, ಸವಾನ್ ಎಸ್. ಕೆ., ಸತೀಶ್, ಶಶಿಧರ್ ನಾಯ್ಕ್, ಅಜಯ್, ಶಾನ್ ಡಿಸೋಜಾ, ಕ್ರತಿನ್ ಕುಮಾರ್,ಆಸ್ಟನ್ ಸಿಕ್ವೇರಾ, ಯೋಗೀಶ್ ನಾಯಕ್, ಯಶವಂತ ಪ್ರಭು,ಆಸೀಫ್ ಜೆಪ್ಪು,ಜೀವನ್ ಮೋರೆ, ಲಕ್ಷ್ಮಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here