
ಕೋವಿಡ್: ಅಂಬುಲೆನ್ಸ್ ಗಾಗಿ ಅಷ್ಟಮಠಾಧೀಶರಿಂದ ರೂ. 20 ಲಕ್ಷ ಜಿಲ್ಲಾಡಳಿತಕ್ಕೆ ಹಸ್ತಾಂತರ
ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆ ವೇಳೆ ಬಳಸಲು ಅಂಬುಲೆನ್ಸ್ ಒಂದರ ಖರೀದಿಗಾಗಿ ಉಡುಪಿಯ ಅಷ್ಟಮಠಾಧೀಶರು ಗಳು ಸೇರಿ 20 ಲಕ್ಷ ರೂ.ಗಳ ಚೆಕ್‌ನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ.
ಅಷ್ಟ ಮಠಗಳ ಎಲ್ಲಾ ಸ್ವಾಮೀಜಿಗಳು ಸೇರಿ ನೀಡಿದ 20 ಲಕ್ಷ ರೂ. ಮೊತ್ತದ ಚೆಕ್‌ನ್ನು ಶನಿವಾರ ಉಡುಪಿ ಶ್ರೀಕೃಷ್ಣ ಮಠದಲ್ಲಿ ಎಲ್ಲಾ ಮಠಾಧೀಶರ ಉಪಸ್ಥಿತಿಯಲ್ಲಿ ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ಅವರಿಗೆ ಹಸ್ತಾಂತರಿಸಲಾಯಿತು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರ ಮನವಿಗೆ ಸ್ಪಂಧಿಸಿದ ಅಷ್ಟಮಠಾಧೀಶರು ಈ ಕೊಡುಗೆಯನ್ನು ನೀಡಿದ್ದಾರೆ. ಚೆಕ್ ಹಸ್ತಾಂತರದ ವೇಳೆಗೆ ಶಾಸಕ ಕೆ.ರಘುಪತಿ ಭಟ್ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸೋಂಕಿತರನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಲು ಅನುಕೂಲವಾಗುವಂತೆ ಆಂಬುಲೆನ್ಸ್ ಖರೀದಿಸುವಂತೆ ಮಠಾಧೀಶು ಶಾಸಕರಲ್ಲಿ ಮನವಿ ಮಾಡಿದರು.