ಕೋವಿಡ್ 19 : ಲಾಕ್ ಡೌನ್ ನಿರ್ಬಂಧಗಳಲ್ಲಿ ಮಾರ್ಪಾಡು ಮಾಡಿ ಬಿಎಸ್ ವೈ ಘೋಷಣೆ

Spread the love

ಕೋವಿಡ್ 19 : ಲಾಕ್ ಡೌನ್ ನಿರ್ಬಂಧಗಳಲ್ಲಿ ಮಾರ್ಪಾಡು ಮಾಡಿ ಬಿಎಸ್ ವೈ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ನನ್ನು ಅನ್ ಲಾಕ್ ಮಾಡುಲಾಗುತ್ತದೆಯೇ ಎಂಬ ಚರ್ಚೆ ಈಗ ಹುಟ್ಟಿಕೊಂಡಿದ್ದು, ಆ ಹಿನ್ನೆಲೆಯಲ್ಲಿಇಂದು(ಗುರುವಾರ, ಜೂನ್ 10) ಮುಖ್ಯಮಂತ್ರಿ ಬಿ ಎಸ್ ವೈ ನೇತೃತ್ವದಲ್ಲಿ ತಜ್ಙರು ಹಾಗೂ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಸಭೆಯ ಬಳಿಕ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಬಿ ಎಸ್ ವೈ, ಸದ್ಯದ ಲಾಕ್ ಡೌನ್ ನಿರ್ಬಂಧಗಳಲ್ಲಿ ಮಾರ್ಪಾಡು ಮಾಡಿ ಘೋಷಣೆ ಮಾಡಿದ್ದಾರೆ

ಇನ್ನು, ಕೋವಿಡ್ ಸೋಂಕಿನ ಪಾಸಿಟಿವಿಟಿ ಜಾಸ್ತಿ ಇರುವ ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ.

11 ಜಿಲ್ಲೆಗಳಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಿ, ಉಳಿದ ಜಿಲ್ಲೆಗಳಲ್ಲಿ ಅನ್ ಲಾಕ್ ನ ಮೊದಲ ಹಂತದ ಘೋಷಣೆ ಮಾಡಿ ಬಿ ಎಸ್ ವೈ ಘೋಷಣೆ ಮಾಡಿದ್ದಾರೆ.

ಅನ್ ಲಾಕ್ ಮೊದಲ ಹಂತದ ಪ್ರಮುಖ ಅಂಶಗಳು

ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ವಿಸ್ತರಣೆ

ಸದ್ಯ ಜಾರಿಯಲ್ಲಿರುವ ಮಾರ್ಗ ಸೂಚಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

ಮಧ್ಯಾಹ್ನ 2 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

ಎಲ್ಲಾ ಕಾರ್ಖಾನೆಗಳಲ್ಲಿ ಶೇ. 50 ರಷ್ಟು ಸಿಬ್ಬಂದಿಗಳೊಂದಿಗೆ ಆರಂಭ

ಎಲ್ಲಾ ನಿರ್ಮಾಣ ಚಟುವಟಿಕೆ ಆರಂಭಿಸಲು ಅವಕಾಶ

11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಲಾಕ್ ಸಡಿಲಿಕೆ

ಮಧ್ಯಾಹ್ನ 2ರವರೆಗೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ

ಶೇಕಡಾ 30 ರಷ್ಟು ಸಿಬ್ಬಂದಿಗಳೊಂದಿಗೆ ಗಾರ್ಮೇಂಟ್ಸ್ ಆರಂಬಕ್ಕೆ ಅವಕಾಶ

ಶುಕ್ರವಾರ ಸಂಜೆಯಿಂದ ವೀಕೆಂಡ್ ಕರ್ಫ್ಯೂ ಜಾರಿ

ಆಟೋ, ಟಾಕ್ಸಿಗಳಲ್ಲಿ ಇಬ್ಬರಿಗೆ ಪ್ರಯಾಣ ಅವಕಾಶ

ಜೂನ್ 14 ರ ನಂತರವೂ ಬಸ್ ಗಳ ಸಂಚಾರವಿಲ್ಲ

ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬೆಂಗಳೂರು ಗ್ರಾ, ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ, ಬೆಳಗಾವಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಲಾಕ್ ಡೌನ್ ವಿಸ್ತರಣೆ

ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿ

ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯ ತನಕ ವೀಕೆಂಡ್ ಕರ್ಫ್ಯೂ

ಹಾಲು, ದಿನಸಿ ಖರೀದಿಗೆ ನಿರ್ಬಂಧ ಮತ್ತಷ್ಟು ಸಡಿಲಿಕೆ


Spread the love

Leave a Reply

Please enter your comment!
Please enter your name here