ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ಮಹಾಸಭೆ

Spread the love

ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ಮಹಾಸಭೆ

ಮಂಗಳೂರು: ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ ಇದರ ೨೦೨೦/೨೦೨೧ರ ಸಾಲಿನ ಪದಾಧಿಕಾರಿಗಳ ಆಯ್ಕೆ ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ ಇದರ ೨೦೨೦/೨೧ರ ವಾರ್ಷಿಕ ಮಹಾಸಭೆ ಮಂಗಳೂರಿನ ಕದ್ರಿಯ ಗೋಕುಲ್ ಹಾಲ್‌ನಲ್ಲಿ ಡಿಸೆಂಬರ್ ೨೭ರ ಭಾನುವಾರ ಸಂಜೆ ೫ಕ್ಕೆ ಗೌರ ವಾಧ್ಯಕ್ಷ ಕಿಶೋರ್ ಡಿ ಶೆಟ್ಟಿ ಹಾಗೂ ಅಧ್ಯಕ್ಷ ಮೋಹನ್ ಕೊಪ್ಪಲ ಕದ್ರಿ ಇವರ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ಈಗಿರುವ ಸಂಸ್ಥೆಯ ಮೂಲ ಸ್ವರೂಪ ಉಳಿಸಿಕೊಂಡು, ಭವಿಷ್ಯದಲ್ಲಿ ಹೊಸ ಯೋಜನೆ, ಯೋಚನೆಗಳೊಂದಿಗೆ ಗಟ್ಟಿಯಾದ ಸಂಸ್ಥೆ ಕಟ್ಟಿ ಬೆಳೆಸಲು ಚರ್ಚೆ ನಡೆಸಲಾಯಿತು. ಮುಂದಿನ ವರ್ಷ ತುಳು ಚಿತ್ರರಂಗಕ್ಕೆ ೫೦ವರ್ಷ ಪೂರೈಸುವ ನಿಟ್ಟಿನಲ್ಲಿ ತುಳುಚಿತ್ರ ಸುವರ್ಣ ಮಹೋತ್ಸವ ಆಚರಿಸುವ ಬಗ್ಗೆಯೂ ತೀರ್ಮಾ ನಿಸಲಾಯಿತು. ೨೦೨೦/೨೧ ಸಾಲಿನ ಪಧಾದಿಕಾರಿಗಳ ಆಯ್ಕೆ ನಡೆಯಿತು ಅಧ್ಯಕ್ಷ ಮೋಹನ್ ಕೊಪ್ಪಲ ಕದ್ರಿ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಜೊತೆ ಕಾರ್ಯದರ್ಶಿಯಾಗಿ ಜೀವನ್ ಉಳ್ಳಾಲ್ ಕೋಶಾಧಿಕಾರಿ ವಿಶ್ವನಾಥ ಗುರುಪುರ ಅವರನ್ನು ಸರ್ವಾನುಮತ ದಿಂದ ಮರು ಆಯ್ಕೆ ಮಾಡಲಾಯಿತು. ರಂಗ್ ಚಿತ್ರದ ನಿರ್ಮಾಪಕರಾದ ಸುಹಾನ್ ಪ್ರಸಾದ್ ಹಾಗೂ ನಿರ್ಮಾ ಪಕ ಸಚಿನ್ ಶೆಟ್ಟಿ ಅವರನ್ನು ಉಪಾ ಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಯುವ ನಟ ನಿಕಿತ್ ಕೊಟ್ಟಾರಿ ಕ್ರೀಡಾ ಕಾರ್ಯದರ್ಶಿ ಆಗಿ ಆಯ್ಕೆ ಆದರೆ, ಸುಕೇಶ್ ಶೆಟ್ಟಿ, ಪ್ರಜ್ವಲ್ ಅತ್ತಾವರ್, ರಂಜನ್ ಬೋಳೂರ್, ಶರಣ್ ಕೈಕಂಬ ಅವರು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಪ್ರಚಾರ ಸಮಿತಿ ಸಂಘಟಕರಾಗಿ ಯುವ ಲೇಖಕ ಜಿತೇಶ್ ಉಳಿಯ ಹಾಗೂ ಸಂದೇಶ್ ಸಾನು ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಸ್ಥಾಪಕ ಸದಸ್ಯ ರಾಜೇಶ್ ಸ್ಕೈಲಾರ್ಕ್ ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಪಮ್ಮಿ ಕೊಡಿಯಾಲ್ ಬೈಲ್, ಗೋಕುಲ್ ಕದ್ರಿ, ಸ್ಥಾಪಕಾದ್ಯಕ್ಷೆ ಅಶ್ವಿನಿ ಕೋಟ್ಯಾನ್ ರವರನ್ನು ನೇಮಿಸಲಾಯಿತು.

ನೂತನ ಕ್ರೀಡಾ ಸಮಿತಿ ರಚಿಸಲಾಯಿತು ಇದರಲ್ಲಿ ಅರ್ಜುನ್ ಕಾಪಿಕಾಡ್, ರೂಪೇಶ್ ಶೆಟ್ಟಿ, ಉದಯ್ ಪೂಜಾರಿ, ಅನೂಪ್ ಸಾಗರ್, ಪ್ರಕಾಶ್ ಶೆಟ್ಟಿ, ಸಂದೀಪ್ ಶೆಟ್ಟಿ ಇವರನ್ನು ನೇಮಿಸಲಾಗಿದೆ.

ಕ್ರೀಡಾ ಕಾರ್ಯಕಾರಿ ಸಮಿತಿಯಲ್ಲಿ ಪ್ರಶಾಂತ್ ಶೆಟ್ಟಿ, ಪ್ರವೀಣ್ ಕೊಡೆಕಲ್ ರಾಕೇಶ್ ದಿಲ್ಸೆ, ಸಿದ್ದಾರ್ಥ ಮೂಲ್ಯ, ಸುನೀಲ್ ಅಶೋಕ್ ನಗರ, ರಿಜ್ವಾನ್, ಪ್ರಶಾಂತ್ ಕಂಕನಾಡಿ, ತಾರನಾಥ್ ಉರ್ವ, ವಿಕ್ರಂ ಶೆಟ್ಟಿ ಸರಪಾಡಿ, ಹಾಗೂ ರಂಜಿತ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಯಲ್ಲಿ ಶರತ್ ಪೂಜಾರಿ, ಅರುಣ್ ಶೆಟ್ಟಿ ಕಡಂದಲೆ, ಲಕ್ಷ್ಮೀಶ ಸುವರ್ಣ, ಅನೀಲ್ ಕರ್ಕೆರ, ಪ್ರಸಾದ್ ಕಂಕನಾಡಿ ಯವರನ್ನು ಆಯ್ಕೆ ಮಾಡ ಲಾಯಿತು. ಮಹಾಸಭೆಯಲ್ಲಿ ಕಿಶೋರ್ ಡಿ ಶೆಟ್ಟಿ, ಮೋಹನ್ ಕೊಪ್ಪಳ, ಅರ್ಜುನ್ ಕಾಪಿಕಾಡ್, ರೂಪೇಶ್ ಶೆಟ್ಟಿ, ಅನೂಪ್ ಸಾಗರ್, ಸಂದೀಪ್ ಶೆಟ್ಟಿ, ಶ್ರೇಯಸ್ ಶೆಟ್ಟಿ, ಸ್ಥಾಪಕಾಧ್ಯಕ್ಷೆ ಅಶ್ವಿನಿ ಕೋಟ್ಯಾನ್, ಕೋಶಾಧಿಕಾರಿ ವಿಶ್ವಾಸ್ ಗುರುಪುರ, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ಜೀವನ್ ಉಳ್ಳಾಲ್, ಸ್ಥಾಪಕ ಸದಸ್ಯ ರಾಜೇಶ್ ಸ್ಕೈಲಾರ್ಕ್, ಹಾಗೂ ಕ್ಯಾಟ್ಕದ ಎಲ್ಲಾ ಸದಸ್ಯರು ಭಾಗವಹಿ ಸಿದ್ದರು. ಕೋಶಾಧಿಕಾರಿ ವಿಶ್ವಾಸ್ ಗುರುಪುರ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಅಧ್ಯಕ್ಷರಾಗಿ ಮೋಹನ್ ಕೊಪ್ಪಲ ಆಯ್ಕೆ


ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ಅಧ್ಯಕ್ಷರಾಗಿ ಕಲಾವಿದ ಮೋಹನ್ ಕೊಪ್ಪಲ ಪುನಾ ರಾಯ್ಕೆಯಾಗಿದ್ದಾರೆ. ಒಕ್ಕೂಟವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿರುವ ಮೋಹನ್ ಕೊಪ್ಪಲ ಅವರು ಒಕ್ಕೂಟಕ್ಕೆ ಹೆಚ್ಚಿನ ಸದಸ್ಯರನ್ನು ನೊಂದಾಯಿಸಿಕೊಂಡಿದ್ದಾರೆ. ತುಳು ಸಿನಿಮಾ ರಂಗಕ್ಕೆ ೫೦ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕ್ಯಾಟ್ಕದ ವತಿಯಿಂದ ತುಳು ಚಿತ್ರ ಸುವರ್ಣ ಮಹೋತ್ಸವ ಆಚರಿಸುವ ಕುರಿತು ಯೋಜನೆಗಳನ್ನು ರೂಪಿಸಿ ಕೊಂಡಿದ್ದಾರೆ. ಲಯನ್ ಕಿಶೋರ್ ಡಿ. ಶೆಟ್ಟಿಯವರ ಮಾರ್ಗದರ್ಶನದಲ್ಲಿ ಸಮಿತಿ ಯೊಂದನ್ನು ನಿರ್ಮಿಸುವುದಾಗಿ ಮೋಹನ್ ಕೊಪ್ಪಲ ತಿಳಿಸಿದ್ದಾರೆ.


Spread the love