ಕ್ರಿಸ್ಮಸ್ : ಕೆಥೊಲಿಕ್ ಸಭಾ ಉಡುಪಿ ವಲಯದಿಂದ ಮಾನವೀಯ ಕಾರ್ಯಕ್ಕೆ ಚಾಲನೆ

Spread the love

ಕ್ರಿಸ್ಮಸ್ : ಕೆಥೊಲಿಕ್ ಸಭಾ ಉಡುಪಿ ವಲಯದಿಂದ ಮಾನವೀಯ ಕಾರ್ಯಕ್ಕೆ ಚಾಲನೆ

ಉಡುಪಿ: ಕ್ರಿಸ್ಮಸ್ ಸಂದರ್ಭದಲ್ಲಿ ಕೆಥೊಲಿಕ್ ಸಭಾ ಉಡುಪಿ ವಲಯ ಸಂಪೂರ್ಣ ದುಸ್ಥೀತಿಯಲ್ಲಿರುವ ಮನೆಯ ನವೀಕರಣದ ಮಾನವೀಯ ಕಾರ್ಯಕ್ಕೆ ಚಾಲನೆ ನೀಡುವುದರ ಮೂಲಕ ಹಬ್ಬವನ್ನು ಆಚರಣೆ ಮಾಡಲಾಯಿತು.

ಕಟಪಾಡಿ ಸಮೀಪದ ಗಿಲ್ಬರ್ಟ್ ಪಿಂಟೊ ಅವರ ಮನೆ ಸಂಪೂರ್ಣವಾಗಿ ದುಸ್ಥಿತಿಯಲ್ಲಿ ಭಯದಲ್ಲಿಯೇ ವಾಸಮಾಡಬೇಕಾಗಿದ್ದು ಆ ಮನೆಯನ್ನು ಸಂಪೂರ್ಣವಾಗಿ ನವೀಕರಿಸುವ ಕೆಲಸಕ್ಕೆ ಶನಿವಾರ ವಲಯಾಧ್ಯಕ್ಷ ರೊನಾಲ್ಡ್ ಡಿ’ಆಲ್ಮೇಡಾ ಅವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಈ ವೇಳೆ ಗಿಲ್ಬರ್ಟ್ ಪಿಂಟೊ ಕುಟುಂಬಕ್ಕೆ ವಲಯ ಸಮಿತಿ ಮತ್ತು 9 ಘಟಕಗಳು ನೀಡಿದ ಒಟ್ಟು ರೂ 10000 ದ ಚೆಕ್ಕನ್ನು ಅಧ್ಯಕ್ಷ ರೊನಾಲ್ಡ್ ಪಿಂಟೊ ಹಸ್ತಾಂತರಿಸಿ ಕ್ರಿಸ್ಮಸ್ ಸಂದರ್ಭದಲ್ಲಿ ಆರಂಭಿಸಿದ ಮನೆಯ ನಿರ್ಮಾಣದ ಕಾರ್ಯ ಮುಂಬರುವ ಈಸ್ಟರ್ ಹಬ್ಬದ ಒಳಗೆ ಮುಕ್ತಾಯ ಕಂಡು ಈ ಕುಟುಂಬ ಹೊಸ ಮನೆಯಲ್ಲಿ ಜೀವನ ನಡೆಸುವಂತಾಗಬೇಕು ಇದಕ್ಕೆ ಸಹೃದಯ ದಾನಿಗಳು ಕೈ ಜೋಡಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭಾ ಕೇಂದ್ರಿಯ ಸಮಿತಿ ಮಾಜಿ ಅಧ್ಯಕ್ಷ ಅಲ್ಫೋನ್ಸ್ ಡಿಕೊಸ್ತಾ, ವಲಯ ನಿಯೋಜಿತ ಅಧ್ಯಕ್ಷ ಬ್ರಾಯನ್ ಕೊರೆಯಾ, ಕಾರ್ಯದರ್ಶಿ ಲವೀನಾ ಪಿರೇರಾ, ಕೋಶಾಧಿಕಾರಿ ಅನಿಲ್ ಡಿಸೋಜಾ, ಉಪಾಧ್ಯಕ್ಷ ವಲೇರಿಯನ್ ಮಥಾಯಸ್, ಸ್ತ್ರೀ ಸಶಕ್ತೀಕರಣ ಪ್ರತಿನಿಧಿ ಫ್ಲಾವಿಯಾ ಡಿಸೋಜಾ, ಕಟಪಾಡಿ ಘಟಕದ ಅಧ್ಯಕ್ಷರಾದ ಕಿರಣ್ ಲೂವಿಸ್, ಅಮ್ಚೊ ಸಂದೇಶ್ ಪ್ರತಿನಿಧಿ ರಫಾಯೆಲ್ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.

ಆಸಕ್ತ ಸಹೃದಯ ದಾನಿಗಳು ಈ ಕುಟುಂಬಕ್ಕೆ ನೆರವು ನೀಡಲು ಇಚ್ಛಿಸಿದ್ದಲ್ಲಿ ವಲಯಾಧ್ಯಕ್ಷ ರೋನಾಲ್ಡ್ ಆಲ್ಮೇಡಾ – 98457 07427 ಸಂಪರ್ಕಿಸಲು ಕೋರಲಾಗಿದೆ


Spread the love