ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಪು ಹೆಚ್ ಸಿ ಅಮೃತೇಶ್ ಮಗಳು ತೃಷಾ ಗೆ ಐಜಿಪಿಯಿಂದ ಸನ್ಮಾನ

Spread the love

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಪು ಹೆಚ್ ಸಿ ಅಮೃತೇಶ್ ಮಗಳು ತೃಷಾ ಗೆ ಐಜಿಪಿಯಿಂದ ಸನ್ಮಾನ

ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕಾಪು ಪೊಲೀಸ್ ಠಾಣಾ ಹೆಚ್.ಸಿ 2021 ನೇ ಅಮೃತೇಶ್ ರವರ ಮಗಳು ಕುಮಾರಿ ತೃಷಾ ರವರನ್ನು ಗುರುತಿಸಿ ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರು ಗುರುತಿಸಿ ಮಂಗಳವಾರ ಕಾಪು ವೃತ್ತ ಕಚೇರಿಯಲ್ಲಿ ಸನ್ಮಾನಿಸಿದರು.

ಕುಮಾರಿ ತೃಷಾ ರವರು ಉಡುಪಿಯ ಸೈಂಟ್ ಸಿಸಿಲಿಯಾ ಹೈಸ್ಕೂಲಿನಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದು, ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುತ್ತಾರೆ. 2018-19 ರಲ್ಲಿ ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟ ಸ್ಪರ್ಧೆಯಲ್ಲಿ 400 ಮೀಟರ್ ಓಟವನ್ನು 1:02:77 ಸಮಯದಲ್ಲಿ ಪೂರೈಸಿ ರಾಜ್ಯ ಮಟ್ಟದ ದಾಖಲೆ ನಿರ್ಮಿಸಿರುತ್ತಾರೆ. ಅಲ್ಲದೇ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟ ಸ್ಪರ್ಧೆಗಳಲ್ಲಿ 100 ಮೀಟರ್, 200 ಮೀಟರ್, ಹಾಗೂ 400 ಮೀಟರ್ ಓಟಗಳಲ್ಲಿ ಬಹುಮಾನಗಳನ್ನು ಪಡೆದಿರುತ್ತಾರೆ.

ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್, ಭರತ್ ರೆಡ್ಡಿ , ಡಿವೈಎಸ್ಪಿ ಕಾರ್ಕಳ ಹಾಗೂ ಸಿಪಿಐ ಕಾಪು ಮಹೇಶ್ ಪ್ರಸಾದ್ ರವರು ಹಾಜರಿದ್ದರು.


Spread the love