ಕ್ರೈಸ್ತ ಪ್ರಾರ್ಥನಾ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿದ ಹಿಂಜಾವೇ ಕಾರ್ಯಕರ್ತರನ್ನು ಬಂಧಿಸಿ – ಪ್ರಶಾಂತ್‌ ಜತ್ತನ್ನ

Spread the love

ಕ್ರೈಸ್ತ ಪ್ರಾರ್ಥನಾ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿದ ಹಿಂಜಾವೇ ಕಾರ್ಯಕರ್ತರನ್ನು ಬಂಧಿಸಿ – ಪ್ರಶಾಂತ್‌ ಜತ್ತನ್ನ

ಉಡುಪಿ: ಪ್ರಾರ್ಥನಾ ಸ್ಥಳಕೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಕೈಸ್ತರು ಮತಾಂತರ ಮಾಡುತ್ತಾರೆ ಎಂಬುದಾಗಿ ಸುಳ್ಳು ಆರೋಪವನ್ನು ಹೊರಿಸಿದ ಹಿಂದೂ ಸಂಘಟನೆಯ ವರ್ತನೆಯನ್ನು ಭಾರತೀಯ ಕ್ರೈಸ್ತ ಒಕ್ಕೂಟದ ಅಧ್ಯಕ್ಷರಾದ ಪ್ರಶಾಂತ್‌ ಜತ್ತನ್ನ ತೀವ್ರವಾಗಿ ಖಂಡಿಸಿದ್ದಾರೆ.

ಕಾರ್ಕಳ ತಾಲೂಕಿನ ನಕ್ರೆ ಎಂಬಲ್ಲಿ ಕ್ರೈಸ್ತ ಸಂಸ್ಥೆಗೆ ಸೇರಿದ ಸ್ಥಳದಲ್ಲಿ ಅಕ್ರಮ ಪ್ರವೇಶ ಮಾಡಿ ಮಹಿಳೆಯರು ಮಕ್ಕಳು ಮತ್ತು ಇತರರ ಮೇಲೆ ಹಲ್ಲೆ ಮಾಡಿ ಅವ್ಯಾಚ ಶಬ್ದಗಳಿಂದ ನಿಂದಿಸಿದ ಸುಳ್ಳು ಆರೋಪ ಮಾಡಿದ ಜನರ ವಿರುದ್ಧ ತಕ್ಷಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒಕ್ಕೂಟ ಒತ್ತಾಯಿಸುತ್ತದೆ.

ನಮ್ಮ ಕ್ರೈಸ್ತ ಸಂಸ್ಥೆಗೆ ಸೇರಿದ ಕಟ್ಟಡದಲ್ಲಿ ಶುಕ್ರವಾರದ ಪ್ರಾರ್ಥನೆ ವಿಧಿವಿಧಾನಗಳು ಮಾಡುವ ಸಮಯದಲ್ಲಿ ಒಂದು ಗುಂಪು ಜನ ಭಯೋತ್ಪಾದಕರಂತೆ ಒಳಗೆ ನುಗ್ಗಿ ದೇವರಿಗೆ ಸ್ತುತಿ ಸಲ್ಲಿಸುತ್ತಿರುವ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಅದನ್ನು ಬಲವಂತ ನಿಲ್ಲಿಸಿ ನೀವು ಮತಾಂತರ ಮಾಡುತ್ತೀರಿ ಎಂದು ಸುಳ್ಳು ಆರೋಪ ಮಾಡಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ ಅವರಿಗೆ ಹೊಡೆದು ಇತರರಿಗೆ ಬೆದರಿಕೆ ಒಡ್ಡಿ ದೈಹಿಕ ಹಲ್ಲೆ ಮಾಡಿ ಭಯಹುಟ್ಟಿಸಿದಂತ ಭಯೋತ್ಪಾದಕ ಗುಂಪನ್ನು ತಕ್ಷಣ ಬಂಧಿಸಬೇಕು ಮತ್ತು ಕಾನೂನು ರೀತಿಯಲ್ಲಿ ಅವರಿಗೆ ಶಿಕ್ಷ ಕೊಡಿಸುವ ಕಾರ್ಯ ಪೊಲೀಸ್ ಇಲಾಖೆ ತಕ್ಷಣ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.


Spread the love

1 Comment

Comments are closed.