
ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ದ ಬೃಹತ್ ಮಾನವ ಸರಪಳಿ ಪ್ರತಿಭಟನೆ
ಬಂಟ್ವಾಳ: ಕ್ರೈಸ್ತ ಸಮುದಾಯ ಬಂಟ್ವಾಳ ವತಿಯಿಂದ ಮೊಗರ್ನಾಡ್ ವಲಯದಿಂದ ಭಾರತದ ಸಂವಿಧಾನದಲ್ಲಿ ಅಲ್ಪ ಸಂಖ್ಯಾತರಿಗೆ ಇರುವ ಹಕ್ಕುಗಳಿಂದ ನಾವು ವಂಚಿತರಾಗಿದ್ದೇವೆ, ಈ ದೇಶದ ನೈಜ್ಯ ಪ್ರಜೆಗಳಾಗಿ ಭಾರತ ದೇಶದಲ್ಲಿ ಜೀವಿಸುವ ಹಕ್ಕು ನಮಗೆ ಸಿಗಲಿ ಎಂಬ ಉದ್ದೇಶದಿಂದ ನಮ್ಮ ಸಂಸ್ಥೆಗಳ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಖಂಡಿಸಿ ಬಿ.ಸಿ.ರೋಡ್ ಬೈಪಾಸ್ ಸರ್ಕಲ್ ಬಳಿ ಕೈಸ್ತ ಸಮುದಾಯದವರಿಂದ ಬೃಹತ್ ಮಾನವ ಸರಪಳಿ ಪ್ರತಿಭಟನೆ ನಡೆಸಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಕಥೋಲಿಕ್ ಸಭಾ ಅಧ್ಯಕ್ಷರಾದ ಸ್ಟ್ಯಾನಿ ಲೋಬೊರವರು ಹಾಗೂ ಕಾರ್ಯದರ್ಶಿ ಅಲ್ಫೋನ್ಸ್ ಫೆರ್ನಾಂಡಿಸ್‌ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕ್ರೈಸ್ತ ಸಮುದಾಯಗಳ ಮೇಲೆ ನಿರಂತರವಾಗಿ ಹಲ್ಲೆ ದೌರ್ಜನ್ಯಗಳು ನಡೆಯುತ್ತಿವೆ. ಸರಕಾರ ಮತ್ತು ಸಂಭಂದಪಟ್ಟ ಇಲಾಖೆಗಳು, ಅಧಿಕಾರಿಗಳು ಕ್ರೈಸ್ತ ಸಮುದಾಯಕ್ಕೆ ರಕ್ಷಣೆ ಒದಗಿಸಬೇಕಾಗಿದೆ ಎಂದರು.
ವಂ| ವಲೇರಿಯನ್ ಡಿಸೋಜ, ವಂ| ಪೀಟರ್ ಡಿಸೋಜ, ವಂ| ಫೆಡ್ರಿಕ್ ಮೊಂತೇರೊ, ವಂ| ಐವನ್ ಪೀಟರ್ ಡಿಮೆಲ್ಲೊ, ವಂ| ಪ್ಯಾಟ್ರಿಕ್ ಸಿಕ್ವೇರಾ, ವಂ| ಜೋನ್ ಪ್ರಕಾಶ್ ಪಿರೇರಾ, ವಂ| ಗ್ರೇಶನ್ ಅಲ್ವಾರಿಸ್, ವಂ| ಫ್ರಾನ್ಸಿಸ್ ಕ್ರಾಸ್ತ, ವಂ| ಲಿಯೊ ಲೋಬೊ, ವಂ| ಆಲ್ವಿನ್ ಡಿಕುನ್ಹ, ವಂ| ಡಾ| ಮಾರ್ಕ್ ಕ್ಯಾಸ್ತೆಲಿನೊ, ವಂ| ಐವನ್ ಮೈಕಲ್ ರೊಡ್ರಿಗಸ್, ವಂ| ಪಾವ್ಲ್ ಪ್ರಕಾಶ್ ಡಿಸೋಜ, ವಂ| ವಿಶಾಲ್ ಮೆಲ್ವಿನ್ ಮೋನಿಸ್, ವಂ| ಸುನಿಲ್ ಪ್ರವೀಣ್ ಪಿಂಟೊ, ವಂ|ಗ್ರೆಗೊರಿ ಪಿರೇರಾ, ವಂ| ಹೆನ್ರಿ ಡಿಸೋಜ, ವಂ| ಸಂತೋಷ್ ಡಿಸೋಜ, ವಂ| ತ್ರಿಶಾನ್, ಧರ್ಮ ಭಗಿನಿಯರು, ಸಾವಿರಾರು ಕ್ರೈಸ್ತ ಭಾಂಧವರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪ್ರತಿಭಟನೆಯ ನಂತರ ಕ್ರೈಸ್ತ ಮುಖಂಡರು ಬಂಟ್ವಾಳ ತಹಶೀಲ್ದಾರವರಿಗೆ ಮನವಿಯನ್ನು ಸಲ್ಲಿಸಿದರು. ವಾಲ್ಟರ್ ನೊರೊನ್ಹ ರವರು ಕಾರ್ಯ ನಿರ್ವಹಿಸಿದರು.