ಕ್ರೈಸ್ತ ಸಮುದಾಯದ ವಿರುದ್ಧ ಶೋಭಾ ಕರಂದ್ಲಾಜೆಯವರ ಅಸಂಬದ್ಧ ಹೇಳಿಕೆಗೆ ಐವನ್ ಡಿ’ಸೋಜಾ ಖಂಡನೆ

Spread the love

ಕ್ರೈಸ್ತ ಸಮುದಾಯದ ವಿರುದ್ಧ ಶೋಭಾ ಕರಂದ್ಲಾಜೆಯವರ ಅಸಂಬದ್ಧ ಹೇಳಿಕೆಗೆ ಐವನ್ ಡಿ’ಸೋಜಾ ಖಂಡನೆ

ಮಂಗಳೂರು: ಚರ್ಚ್ ಗಳಲ್ಲಿ ಕೋವಿಡ್ ಲಸಿಕೆ ಪಡೆದುಕೊಳ್ಳಬಾರದೆಂದು ಪ್ರಚಾರಪಡಿಸಲಾಗುತ್ತಿದೆ ಎಂಬ ಉಡುಪಿ ಸಂಸದೆ ಶೋಭಾ ಕರಂದ್ಲಾಜೆಯವರ ಹೇಳಿಕೆಯು ಖಂಡನಾರ್ಹ..ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯವನ್ನು ಮುಚ್ಚಿ ಹಾಕಲು ಕೋಮು ವಿಚಾರಗಳನ್ನು ಎಳೆದು ತರಲಾಗುತ್ತಿದೆ ಎಂದು ಎ.ಐ.ಸಿ.ಸಿ.ಕಾರ್ಯದರ್ಶಿಗಳಾದ ಐವನ್ ಡಿ’ಸೋಜಾರವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಎಲ್ಲಾ ಚರ್ಚ್ ಗಳಲ್ಲಿ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ಅರಿವು ಮೂಡಿಸಲಾಗುತ್ತಿದೆ, 45 ವರ್ಷ ಮೇಲ್ಪಟ್ಟ ಎಲ್ಲಾ ಕ್ರೈಸ್ತ ಧರ್ಮಗುರುಗಳು ಈಗಾಗಲೇ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ನಾನೇ ಖುದ್ದಾಗಿ ಚರ್ಚ್ ಗಳಲ್ಲಿ ಲಸಿಕೆ ಶಿಬಿರವನ್ನು ಆಯೋಜಿಸಿದ್ದೇನೆ. ಆದರೆ ಶೋಭಾ ಕರಂದ್ಲಾಜೆಯವರಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ರಾಜಕೀಯ ಲಾಭಕ್ಕಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಬಾರದು ಇದನ್ನು ನಾವು ಸಹಿಸುವುದಿಲ್ಲವೆಂದು ಐವನ್ ಅವರು ಹೇಳಿದ್ದಾರೆ.

ಸಂಸದರಾಗಿ ಶೋಭಾರವರ ಸಾಧನೆ ಶೂನ್ಯ ಪ್ರಸ್ತುತ ರಾಜ್ಯದಲ್ಲಿ ಲಸಿಕೆ ಕೊರತೆಯಿದ್ದು, ಎಲ್ಲರಿಗೂ ಲಸಿಕೆಯನ್ನು ತಲುಪಿಸುವ ನಿಟ್ಟಿನಲ್ಲಿ ಅವರು ಕಾರ್ಯನಿರ್ವಹಿಸಲಿ. ಆದರೆ ಅದನ್ನು ಅವರು ಮಾಡುವುದಿಲ್ಲ ಧರ್ಮಗಳ ನಡುವೆ ಕಂದಕವನ್ನು ಸೃಷ್ಠಿಸಿದರೆ ಮಾತ್ರ ಅವರಿಗೆ ಲಾಭವೆಂದು ಐವನ್ ಡಿ’ಸೋಜಾರವರು ಹೇಳಿದ್ದಾರೆ. ಶೋಭಾರವರು ತಮ್ಮ ಹೇಳಿಕೆಯನ್ನು ಹಿಂಪಡೆದು ತಕ್ಷಣವೇ ಕ್ರೈಸ್ತ ಸಮುದಾಯದ ಕ್ಷಮೆಯನ್ನು ಕೇಳಬೇಕೆಂದು ಅವರು ಆಗ್ರಹಿಸಿದ್ದಾರೆ.


Spread the love