ಕ್ಷಮೆ ಕೇಳಿದರೆ ಸಾಲಲ್ಲ, ಬೊಮ್ಮಾಯಿಯವರೇ, ಸಚಿವ ಸೋಮಣ್ಣ ಅವರ ರಾಜೀನಾಮೆ ಪಡೆಯಿರಿ – ಅನಿತಾ ಡಿ’ಸೋಜಾ ಬೆಳ್ಮಣ್

Spread the love

ಕ್ಷಮೆ ಕೇಳಿದರೆ ಸಾಲಲ್ಲ, ಬೊಮ್ಮಾಯಿಯವರೇ, ಸಚಿವ ಸೋಮಣ್ಣ ಅವರ ರಾಜೀನಾಮೆ ಪಡೆಯಿರಿ – ಅನಿತಾ ಡಿ’ಸೋಜಾ ಬೆಳ್ಮಣ್

ಕಾರ್ಕಳ: ವಸತಿ ಮತ್ತು ಮೂಲಸೌಕರ್ಯ ಸಚಿವ ಮತ್ತು ಚಾಮರಾಜನಗರ ಉಸ್ತುವಾರಿ ಸಚಿವರಾದ ವಿ ಸೋಮಣ್ಣರವರು ಗ್ರಾಮೀಣ ಪ್ರದೇಶಗಳ ಹಕ್ಕುಪತ್ರವಿತರಣಾ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರಿಗೆ ಹೊಡೆದಿರುವುದು ಬಿಜೆಪಿಯವರ ಸಂಸ್ಕೃತಿಯನ್ನು ಹಾಗೂ ಮಹಿಳೆಯರ ಮೇಲೆ ಅವರಿಗಿರುವ ಗೌರವವನ್ನು ತೋರಿಸುತ್ತದೆ ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ಅನಿತಾ ಡಿಸೋಜ ಬೆಳ್ಮಣ್ ಅಗ್ರಹಿಸಿದ್ದಾರೆ.

ಮನವಿ ಹೊತ್ತು ಬರುವವರನ್ನು ಮಹಿಳೆ ಎಂದು ನೋಡದೆ‌ ಹಲ್ಲೆ ಮಾಡುವಷ್ಟು ಸೊಕ್ಕು ಇರುವ ವ್ಯಕ್ತಿಗಳು ಅಧಿಕಾರದಲ್ಲಿ ಮುಂದುವರಿಯಲು ಅರ್ಹರಲ್ಲ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೂಡಲೇ ಸಚಿವ ಸೋಮಣ್ಣರವರಿಂದ ರಾಜೀನಾಮೆ ಪಡೆಯಬೇಕು. ಕಷ್ಟ ಸುಖ ತೋಡಿಕೊಳ್ಳಲು ಬಂದ ಮಹಿಳೆಯೊಬ್ಬರ ಮೇಲೆ ಒಬ್ಬ ಮಂತ್ರಿ ಹೊಡೆಯುವುದು ಅಕ್ಷಮ್ಯ. ಇವರಿಗೆ ಅಧಿಕಾರ ಕೊಟ್ಟಿರುವುದು ಹೊಡೆಯಲಿಕ್ಕಾ ಬಡವರು, ಹಿಂದುಳಿದವರ್ಗದವರು, ದಲಿತರ, ಮೇಲೆ ದರ್ಪ ತೋರಿಸಲು ಅಧಿಕಾರ ಕೊಡಲಾಗಿದೆಯಾ?

ಇಂತಹ ವರ್ತನೆ ಬಿಜೆಪಿಯವರ ಸಂಸ್ಕೃತಿಯಾಗಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನ ಮಳೆಯಿಂದ ತಮ್ಮ ಮನೆ ಮುಳುಗಡೆಯಾಗಿದೆ ಎಂದು ಶಾಸಕ ಅರವಿಂದ ಲಿಂಬಾವಳಿಯವರು ಮಹಿಳೆಯೊಬ್ಬರ ಬಳಿ ಅಸಭ್ಯವಾಗಿ ವರ್ತಿಸಿದ್ದರು‌ ಮನವಿ ಹೊತ್ತುಕೊಂಡು ಬಂದ ಮಹಿಳೆಯರೊಂದಿಗೆ ಹೀಗೆಯೇ ವರ್ತಿಸಬೇಕೆಂಬುದು ಬಿಜೆಪಿ ಅವರ ನಿಲುವೇ ? ಭ್ರಷ್ಟಾಚಾರ ಆಡಳಿತ ವೈಫಲ್ಯ ತನ್ನ ಜನ ವಿರೋಧಿ ನೀತಿಗಳಿಂದ ತನ್ನ ಆಡಳಿತದ ವಿರೋಧವನ್ನು ಜನರಿಂದ ಕಟ್ಟಿಕೊಂಡ ಬಿಜೆಪಿ ಸರಕಾರ ತನ್ನ ಹತಾಶೆಯನ್ನು ಜನರ ಅದರಲ್ಲೂ ಮಹಿಳೆಯರ ಮೇಲೆ ತೋರಿಸುವುದನ್ನು ಬಿಟ್ಟು ಒಳ್ಳೆಯ ಆಡಳಿತ ನೀಡುವಲ್ಲಿ ಗಮನಕೊಡಬೇಕು.

ಮಹಿಳೆಯ ಮೇಲೆ ನಡೆಸಿದ ಹಲ್ಲೆಯ ಘಟನೆ ಆದ ನಂತರ ಸೋಮಣ್ಣರವರು ಕ್ಷಮೆ ಕೇಳಿದ ಸುದ್ದಿ ಬಂದಿದ್ದು ಕ್ಷಮೆ ಕೇಳಿದರೂ ಕೂಡ ಸೋಮಣ್ಣ ಅವರನ್ನು ಸಚಿವ ಸಂಪುಟದಲ್ಲಿ ಮುಂದುವರಿಯಲು ಬೊಮ್ಮಾಯಿಯವರು ಬಿಡಬಾರದು ಕ್ಷಮಿಸಿ ಬಿಡುವಂತಹ ಘಟನೆ ಇದಲ್ಲ ಎಂಬುದನ್ನು ಬೊಂಬಾಯಿಯವರು ಮನಗಾಣಬೇಕು ಕೂಡಲೇ ಬೊಮ್ಮಾಯಿ ಅವರ ರಾಜೀನಾಮೆ ಪಡೆಯಲೇಬೇಕು ಹಾಗೆಯೇ ಪೊಲೀಸ್ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಸೋಮಣ್ಣ ರವರ ಮೇಲೆ ಮಹಿಳೆ ಮೇಲಿನ ದೌರ್ಜನ್ಯದ ಕೇಸು ದಾಖಲಿಸಿಕೊಳ್ಳಬೇಕು ಅವರು ಅಗ್ರಹಿಸಿದ್ದಾರೆ.


Spread the love