Home Mangalorean News Kannada News ಖಲೀಲ್ ಚೂರಿ ಇರಿತ ಪ್ರಕರಣ ; ಹಿಂಜಾವೇ ನಾಯಕನ ಬಂಧನ

ಖಲೀಲ್ ಚೂರಿ ಇರಿತ ಪ್ರಕರಣ ; ಹಿಂಜಾವೇ ನಾಯಕನ ಬಂಧನ

Spread the love

ಖಲೀಲ್ ಚೂರಿ ಇರಿತ ಪ್ರಕರಣ ; ಹಿಂಜಾವೇ ನಾಯಕನ ಬಂಧನ

ಮಂಗಳೂರು: ಕಲ್ಲಡ್ಕ ಇಬ್ರಾಹಿಂ ಕಲೀಲ್ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೋಲಿಸರು ಹಿಂದು ಜಾಗರಣ ವೇದಿಕೆಯ ಮುಖಂಡನನ್ನು ಗುರುವಾರ ಬಂಧಿಸಿದ್ದಾರೆ.

ಬಂಧಿತನನ್ನು ಕಲ್ಲಡ್ಕ ನಿವಾಸಿ ರತ್ನಾಕರ ಶೆಟ್ಟಿ ಎಂದು ಗುರುತಿಸಲಾಗಿದೆ.

ಜುಲೈ 13 ರಂದು ಇಬ್ರಾಹಿಂ ಕಲೀಲ್ ಅವರಿಗೆ ರತ್ನಾಕರ್ ಶೆಟ್ಟಿ ಮತ್ತು ನಾಲ್ವರ ತಂಡ ಸೇರಿ ಚೂರಿಯಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದರು ಎನ್ನಲಾಗಿದೆ. ಈ ಕುರಿತು ಖಲೀಲ್ ಅವರು ಬಂಟ್ವಾಳ ಠಾಣೆಯಲ್ಲಿ ರತ್ನಾಕರ ಶೆಟ್ಟಿ ಮತ್ತು ಇತರ ನಾಲ್ವರ ವಿರುದ್ದ ದೂರು ದಾಖಲಿಸಿದ್ದರು.

ಘಟನೆಯ ಬಳಿಕ ರತ್ನಾಕರ ಶೆಟ್ಟಿ ಕೂಡ ಖಲೀಲ್ ವಿರುದ್ದ ಪ್ರತಿದೂರನ್ನು ದಾಖಲಿಸಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.  ಜೂನ್ 14 ರಂದು ರಾತ್ರಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದು, ಒಂದುವರೆ ತಿಂಗಳ ಬಳಿಕ ಪೋಲಿಸರು ರತ್ನಾಕರ ಶೆಟ್ಟಿಯನ್ನು ಬಂಧಿಸಿದ್ದಾರೆ.


Spread the love

Exit mobile version