ಖಾಲಿ ನೀರಿನ ತೊಟ್ಟಿಯಲ್ಲಿ ಶಿಶುವಿನ ಶವ ಪತ್ತೆ

Spread the love

ಖಾಲಿ ನೀರಿನ ತೊಟ್ಟಿಯಲ್ಲಿ ಶಿಶುವಿನ ಶವ ಪತ್ತೆ

ಕೊಳ್ಳೇಗಾಲ: ಅಂಗವೈಕಲ್ಯದ ನವಜಾತ ಶಿಶುವಿನ ಶವ ಖಾಸಗಿ ಆಸ್ಪತ್ರೆಯ ಖಾಲಿ ನೀರಿನ ತೊಟ್ಟಿಯಲ್ಲಿ ಪತ್ತೆಯಾದ ಘಟನೆ ತಾಲೂಕಿನ ಕಾಮಗೆರೆಯಲ್ಲಿ ನಡೆದಿದೆ.

ದುರ್ವಾಸನೆ ಬೀರುತ್ತಿದ್ದ ಹಿನ್ನಲೆಯಲ್ಲಿ ಹುಡುಕಿಕೊಂಡ ಹೋದ ಇಲ್ಲಿನ ಹೋಲಿಕ್ರಾಸ್ ಆಸ್ಪತ್ರೆಯ ಸಿಬ್ಬಂದಿಗೆ ಶವಾಗಾರದ ಬಳಿ ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿ ಖಾಲಿ ನೀರಿನ ತೊಟ್ಟಿಯಲ್ಲಿ ಹಾಕಿದ್ದ ಕೊಳೆತ ಸ್ಥಿತಿಯಲ್ಲಿದ್ದ ನವಜಾತ ಶಿಶುವಿನ ಶವ ಪತ್ತೆಯಾಗಿದೆ.

ಪತ್ತೆಯಾದ ನವಜಾತ ಗಂಡು ಶಿಶು ಅಂದಾಜು 6 ದಿನದಾಗಿದ್ದು ಕರುಳಬಳ್ಳಿ ಕತ್ತರಿಸದೇ ಹಾಗೆ ಬಿಟ್ಟಿದ್ದು ಅಂಗವೈಕಲ್ಯ ಹೊತ್ತುಕೊಂಡು ಜನಿಸಿರುವ ಕಾರಣ ಹೆತ್ತವರು ಪ್ಲಾಸ್ಟಿಕ್ ಕವರ್ ನಲ್ಲಿ ಮಗುವನ್ನು ಹಾಕಿ ಬಿಸಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಆಸ್ಪತ್ರೆಯಲ್ಲೇ ಹೆರಿಗೆಯಾಗಿದ್ದರೇ ಕರುಳ ಬಳ್ಳಿಯನ್ನು ಕತ್ತರಿಸುತ್ತಿದ್ದರಿಂದ ಆಸ್ಪತ್ರೆಯಲ್ಲಿ ಈ ಮಗು ಜನಿಸಿಲ್ಲ. ಬಹುಶಃ ಬೇರೆಡೆ ಜನಿಸಿದ ಮಗುವನ್ನು ತಂದು ಇಲ್ಲಿ ಎಸೆದು ಹೋಗಿರಬಹುದೆಂದು ಸಂಶಯ ವ್ಯಕ್ತಪಡಿಸಲಾಗಿದೆ. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಪರಿಶೀಲಿಸಲಾಗುತ್ತಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪಿಐ ಸಂತೋಷ್ ಕಶ್ಯಪ್ ತಿಳಿಸಿದ್ದಾರೆ.


Spread the love