ಖಾಸಗಿ ಕಂಪೆನಿಯ ಡೇಟಾ ಕಳವು: ಕುಂದಾಪುರದ ಐವರ ವಿರುದ್ದ ಪೊಲೀಸರಿಗೆ ದೂರು

Spread the love

ಖಾಸಗಿ ಕಂಪೆನಿಯ ಡೇಟಾ ಕಳವು: ಕುಂದಾಪುರದ ಐವರ ವಿರುದ್ದ ಪೊಲೀಸರಿಗೆ ದೂರು

ಕುಂದಾಪುರ: ಖಾಸಗಿ ಕಂಪೆನಿಯೊಂದರ ಡೇಟಾವನ್ನು ಕಳವು ಮಾಡಿದ ಆರೋಪದ ಮೇಲೆ ಕುಂದಾಪುರ‌ ಮೂಲದ ಐದು ಮಂದಿಯ ವಿರುದ್ದ ಬೆಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ ಮೂಲದ ಹರ್ಷವರ್ಧನ್ ಶೆಟ್ಟಿ, ಅರುಣ್ ಶೆಟ್ಟಿ, ರಂಜಿತ್ ಶೆಟ್ಟಿ, ಸಚಿನ್ ಶೆಟ್ಟಿ, ನಿತಿನ್ ಶೆಟ್ಟಿ ಎನ್ನುವವರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ.

ತಾಲೂಕಿನ ಮುಳ್ಳಿಕಟ್ಟೆ ಎಂಬಲ್ಲಿ ಡೇಟಾ ಬೇಸ್ ಸರ್ವೀಸ್ ಒದಗಿಸುತ್ತಿರುವ ಬೆಂಗಳೂರಿನಲ್ಲಿ‌ ಕೇಂದ್ರ ಕಚೇರಿಯನ್ನು ಹೊಂದಿರುವ ಬಿಲಾಂಗ್ ಹಿಯರ್ ಎಲ್ ಎಲ್ ಪಿ ಪಾರ್ಟನರ್ ಶಿಪ್ ಕಂಪೆನಿಯ ಸಿಸ್ಟಮ್ ಮ್ಯಾನೆಜ್ ಮಾಡಲು ಐವರು ಆರೋಪಿಗಳನ್ನು ನೇಮಕ ಮಾಡಲಾಗಿತ್ತು.

ಕೆಲವು ದಿನಗಳ‌ ಹಿಂದೆ ಇವರು ವಿವಿಧ ಕಾರಣಗಳನ್ನು ನೀಡಿ ಕಂಪೆನಿಯನ್ನು ತೊರೆದಿದ್ದರು. ಆ ಬಳಿಕ ಮಾರ್ಕೆಟ್ ರಿಸರ್ಚ್ ಮುಖಾಂತರ ಕಂಪೆನಿಯ 2.5 ಕೋಟಿ ರೂ‌. ಡೇಟಾವನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಬೆಂಗಳೂರಿ‌‌ನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


Spread the love