ಖಾಸಗಿ ಕಾಲೇಜಿನ ಪಿ.ಆರ್.ಓ ವಿರುದ್ದ ಮೊಕದ್ದಮೆ ದಾಖಲಿಸಲು ಜನವಾದಿ ಮಹಿಳಾ ಸಂಘಟನೆ ಒತ್ತಾಯ

Spread the love

ಖಾಸಗಿ ಕಾಲೇಜಿನ ಪಿ.ಆರ್.ಓ ವಿರುದ್ದ ಮೊಕದ್ದಮೆ ದಾಖಲಿಸಲು ಜನವಾದಿ ಮಹಿಳಾ ಸಂಘಟನೆ ಒತ್ತಾಯ

ಕುಂದಾಪುರ: ಕುಂದಾಪುರದ ಖಾಸಗಿ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿಯವರು ಕಾಲೇಜಿನ ವಿದ್ಯಾರ್ಥಿನಿಯರಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದರ ವಿರುದ್ದ ಆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಫಲವಾಗಿ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಪೋಲೀಸರು ಸಾರ್ವಜನಿಕ ಸಂಪರ್ಕಾಧಿಕಾರಿಯ ವಿರುದ್ದ ಮೊಕದ್ದಮೆ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನವಾದಿ ಮಹಿಳಾ ಸಂಘಟನೆ ಕುಂದಾಪುರ ತಾಲೂಕು ಸಮಿತಿ ಆಗ್ರಹಿಸಿದೆ

ವಿದ್ಯಾರ್ಥಿನಿಯರಿಗೆ ಆದ ಅನ್ಯಾಯದ ವಿರುದ್ದ ಐಕ್ಯತೆಯಿಂದ ಹೋರಾಡಿದ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳನ್ನು ಜೆ.ಎಮ್.ಎಸ್.ಅಭಿನಂದಿಸಿದೆ.


Spread the love