
ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಐದು ಪದಕ ಗೆದ್ದ ಮಾಧವನ್ ಪುತ್ರ ವೇದಾಂತ್
ಭೋಪಾಲ್: ನಟ ಆರ್.ಮಾಧವನ್ ಅವರ ಪುತ್ರ ವೇದಾಂತ್ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ದೊಡ್ಡ ಗೆಲುವು ಸಾಧಿಸಿದ್ದಾರೆ. ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದ ಈಜುಪಟು ವೇದಾಂತ್ ಪಂದ್ಯಾವಳಿಯಲ್ಲಿ ಐದು ಚಿನ್ನದ ಪದಕಗಳನ್ನು (100ಮೀ, 200ಮೀ ಮತ್ತು 150ಮೀ) ಮತ್ತು ಎರಡು ಬೆಳ್ಳಿ ಪದಕಗಳನ್ನು (400ಮೀ ಮತ್ತು 800ಮೀ) ಗೆದ್ದರು.
ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡ ಆರ್ ಮಾಧವನ್, “ಎರಡು ಟ್ರೋಫಿ ಗೆದ್ದ ಮಹಾರಾಷ್ಟ್ರ ತಂಡಕ್ಕೆ ಅಭಿನಂದನೆಗಳು. ಮಹಾರಾಷ್ಟ್ರದ ಬಾಲಕರ ಈಜು ತಂಡಕ್ಕೆ ಒಂದು ಮತ್ತು 2ನೇ ಇಡೀ ಖೇಲೋ ಗೇಮ್‌ಗಳಲ್ಲಿ ಮಹಾರಾಷ್ಟ್ರಕ್ಕೆ ಒಟ್ಟಾರೆ ಚಾಂಪಿಯನ್‌ಶಿಪ್ ಟ್ರೋಫಿ. ಅಪೇಕ್ಷಾ ಫರ್ನಾಂಡಿಸ್ (6 ಚಿನ್ನ, 1 ಬೆಳ್ಳಿ ಮತ್ತು ದಾಖಲೆಗಳು) ಮತ್ತು ವೇದಾಂತ್ ಮಾಧವನ್ (5 ಚಿನ್ನ ಮತ್ತು 2 ಬೆಳ್ಳಿ) ಅವರ ಪ್ರದರ್ಶನ ಮತ್ತು ಸಾಧನೆಗಳಿಂದ ಹೃದಯ ತುಂಬಿದೆ. ಮಧ್ಯಪ್ರದೇಶದ ಸರ್ಕಾರ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅನುರಾಗ್ ಠಾಕೂರ್ ಜಿ, ಆಕ್ವಾ ನೇಷನ್ ಮತ್ತು ಪ್ರದೀಪ್ ಸರ್ ಅವರಿಗೆ ಧನ್ಯವಾದಗಳು. ತುಂಬಾ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ.