ಖೋಟಾ ನೋಟು ಚಲಾವಣೆ ಪ್ರಕರಣ; ಇಬ್ಬರ ಬಂಧನ

Spread the love

ಖೋಟಾ ನೋಟು ಚಲಾವಣೆ ಪ್ರಕರಣ; ಇಬ್ಬರ ಬಂಧನ
 
ಮಂಗಳೂರು: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೋಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 500 ರೂ. ಮುಖ ಬೆಲೆಯ 4.5ಲಕ್ಷ ಖೋಟ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ನಿವಾಸಿ ನಿಜಾಮುದ್ದೀನ್ ಅಲಿಯಾಸ್ ನಿಜಾಂ ( 32 ), ಜೆಪ್ಪು ಮಂಗಳೂರು ನಿವಾಸಿ ರಜೀಮ್ ಅಲಿಯಾಸ್ ರಾಫಿ ( 31) ಎಂದು ಗುರುತಿಸಲಾಗಿದೆ.

ಸುದ್ದಿಗಾರರಿಗೆ ಮಂಗಳವಾರ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದರು.

ಜ. 2ರಂದು ಮಂಗಳೂರು ನಗರದ ನಂತೂರು ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿರುವ ಸಮಯ, ನಂತೂರು ಕಡೆಯಿಂದ ಬಂದ, ಒಂದು ಸ್ಕೂಟರ್ ನಲ್ಲಿ ಇಬ್ಬರು ಸದಾರರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು, ಅತೀ ವೇಗವಾಗಿ ಚಲಾಯಿಸಿ ಪೊಲೀಸರಿಂದ ತಪ್ಪಿಕೊಳ್ಳಲು ಪ್ರಯತ್ನಿಸಿದ್ದರು. ಆಗ ಮಂಗಳೂರು ಪೂರ್ವ ಠಾಣೆಯ ಪೊಲೀಸರು ತಡೆದು ಪರಿಶೀಲಿಸಿ. ಅವರ ವಶದಲ್ಲಿದ್ದ ರೂ. 500 ಮುಖಬೆಲೆಯ ರೂ. 4,50,000/- ಖೋಟಾ ನೋಟುಗಳನ್ನು ಪತ್ತೆ ಹಚ್ಚಿ, ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

ನೋಟು ನೋಟುಗಳನ್ನು ಬೆಂಗಳೂರಿನಿಂದ ಡ್ಯಾನಿಯಲ್ ಎಂಬಾತನಿಂದ ಪಡೆದು, ಅವುಗಳನ್ನು ಮಂಗಳೂರು ನಗರದಲ್ಲಿ ನೋಟುಗಳನ್ನು ಚಲಾವಣೆ ಮಾಡುವ ಬಗ್ಗೆ, ಆರೋಪಿಗಳು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸುಲಿಗೆ ಮಾಡಿದ ಸ್ಕೂಟರ್ ನಲ್ಲಿ ಅವುಗಳನ್ನು ಚಲಾವಣೆಗೆ ಕೊಂಡು ಹೋಗುತ್ತಿದ್ದ ಸಮಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿತರ ಬಗ್ಗೆ ಇನ್ನೂ ಹೆಚ್ಚಿನ ವಿಚಾರಣೆ ಅಗತ್ಯ ಎದ್ದು ಪೊಲೀಸ್‌ ಕನ್ನೆಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗುವುದು ಎಂದರು.

ಗೋಷ್ಠಿಯಲ್ಲಿ ಡಿಸಿಪಿ ಅಂಶು ಕುಮಾರ್, ದಿನೇಶ್ ಕುಮಾರ್, ಎಸಿಪಿ ರವೀಶ್ ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here