
ಗಂಗೊಳ್ಳಿ: ಅಡಿಕೆ ಕೊಯ್ಯಲು ಹೋದ ವೇಳೆ ವಿದ್ಯುತ್ ತಗುಲಿ ವ್ಯಕ್ತಿ ಮೃತ್ಯು
ಕುಂದಾಪುರ: ವ್ಯಕ್ತಿಯೋರ್ವರು ಅಡಿಕೆ ಕೊಯ್ಯಲು ತೆರಳಿದ್ದ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟ ಖೇದಕರ ಘಟನೆ ಇಲ್ಲಿನ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಸಮೀಪದ ಕೋಣ್ಕಿ ಎಂಬಲ್ಲಿ ಗುರುವಾರ ಸಂಭವಿಸಿದೆ.
ಕೋಣ್ಕಿ ಅಂಗಡಿ ಬೆಟ್ಟು ನಿವಾಸಿ ಭುಜಂಗ ಶೆಟ್ಟಿ (58) ಮೃತ ವ್ಯಕ್ತಿ.
ತಮ್ಮ ತೋಟದ ಅಡಿಕೆ ಕೊಯ್ಯಲು ಹಾಗೂ ಅಡಿಕೆ ಗರಿಗಳನ್ನು ಕತ್ತರಿಸಲು ಭುಜಂಗ ಶೆಟ್ಟಿಯವರು ಉದ್ದದ ಕಬ್ಬಿಣದ ಕೊಕ್ಕೆ ಮೂಲಕ ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ತೋಟದಲ್ಲಿ ಹಾದುಹೋದ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ಕಬ್ಬಣದ ಕೊಕ್ಕೆ ತಗುಲಿದ ಪರಿಣಾಮ ವಿದ್ಯುತ್ ಶಾಕ್ ತಗುಲಿ ಭುಜಂಗ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಗಂಗೊಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಕೇಶವ, ಚಾಲಕ ದಿನೇಶ್ ಬೈಂದೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಗೊಳ್ಳಿಯ 24×7 ಆಂಬುಲೆನ್ಸ್ ನಿರ್ವಾಹಕ ಇಬ್ರಾಹಿಂ ಗಂಗೊಳ್ಳಿ, ಸಿಬ್ಬಂದಿಗಳಾದ ಅಬ್ರಾರ್, ಸಫ್ವಾನ್ ಹಾಗೂ ಸ್ಥಳೀಯರು ಮೃತದೇಹ ಸಾಗಿಸಲು ನೆರವಾದರು.