ಗಂಗೊಳ್ಳಿ ಖಾರ್ವಿಕೇರಿ ಮಾರಿ ಜಾತ್ರಾ ಮಹೋತ್ಸವ – ಫೆ. 2-3 ರಂದು ಮದ್ಯ ಮಾರಾಟ ನಿಷೇಧ

Spread the love

ಗಂಗೊಳ್ಳಿ ಖಾರ್ವಿಕೇರಿ ಮಾರಿ ಜಾತ್ರಾ ಮಹೋತ್ಸವ – ಫೆ. 2-3 ರಂದು ಮದ್ಯ ಮಾರಾಟ ನಿಷೇಧ

ಕುಂದಾಪುರ: ಗಂಗೊಳ್ಳಿ ಮಹಾಕಾಳಿ ಅಮ್ಮನವರ ದೇವಸ್ಥಾನ ಖಾರ್ವಿಕೇರಿ ಇದರ ಮಾರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಫೆಬ್ರವರಿ 2 ರ ಬೆಳಿಗ್ಗೆ 6 ಗಂಟೆಯಿಂದ ಫೆ 3 ರ ಮಧ್ಯರಾತ್ರಿ 12 ಗಂಟೆಯವರಿಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಜಿ ಜಗದೀಶ್ ಆದೇಶ ಹೊರಡಿಸಿದ್ದಾರೆ.

ಫೆಬ್ರವರಿ 2 ರಂದು ಶ್ರೀ ಮಹಾಕಾಳಿ ಅಮ್ಮನವರ ದೇವಸ್ಥಾನ ಖಾರ್ವಿಕೇರಿ ಗಂಗೊಳ್ಳಿಯಲ್ಲಿ ಮಾರಿ ಜಾತ್ರಾ ಮಹೋತ್ಸವ ನಡೆಯಲಿರುವ ಹಿನ್ನಲೆಯಲ್ಲಿ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ ಹಾಗೂ ತ್ರಾಸಿ ಗ್ರಾಮಗಳ ವ್ಯಾಪ್ತಿಯಲ್ಲಿ ಫೆಬ್ರವರಿ 2 ರ ಬೆಳಿಗ್ಗೆ 6 ಗಂಟೆಯಿಂದ ಫೆ 3 ರ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ & ರೆಸ್ಟೋರೆಂಟ್ ಮತ್ತು ವೈನ್ ಶಾಪ್ ಗಳ ಮದ್ಯಮಾರಾಟವನ್ನು ಮುಚ್ಚಲು ಮತ್ತು ಡ್ರೈ ಡೇ ಘೋಷಣೆ ಮಾಡಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಆದೇಶ ನೀಡಿದ್ದಾರೆ.


Spread the love